ಭೂಮಿಕಡೆ ಬರುತ್ತಿದೆ 500 ಟ್ರಿಲಿಯನ್​ ಭಾರದ ಧೂಮಕೇತು!

masthmagaa.com:

ಭೂಮಿಯ ಕಣ್ಣು ಅಂತಾನೆ ಹೇಳಲಾಗುವ ನಾಸಾದ ಹಬಲ್‌ ಟೆಲಿಸ್ಕೋಪ್‌ ಒಂದು ವಿಶಿಷ್ಟವಾದ ಧೂಮಕೇತುವನ್ನ ಸೆರೆ ಹಿಡಿದಿದೆ. ಸುಮಾರು 500 ಟ್ರಿಲಿಯನ್‌ ಟನ್‌ನಷ್ಟು ಭಾರವಾಗಿರುವ ಈ ಧೂಮಕೇತು, 22 ಸಾವಿರ ಮೈಲ್ಸ್‌ ಪರ್‌ ಹವರ್‌ ವೇಗದಲ್ಲಿ ಭೂಮಿಯ ಕಡೆಗೆ ಧಾವಿಸ್ತಾ ಇರೋದು ಗೊತ್ತಾಗಿದೆ. ಅಲ್ಲದೆ ಹಿಮದಿಂದ ಆವೃತವಾದ ಈ ಧೂಮಕೇತು ಸಾಮಾನ್ಯವಾಗಿ ಕಾಣಸಿಗುವ ಧೂಮಕೇತುಗಳಿಗಿಂತ 50 ಪಟ್ಟು ದೊಡ್ಡದಾಗಿದೆ ಅಂತ ನಾಸಾ ಹೇಳಿದೆ. ಇನ್ನು ಈ ಧೂಮಕೇತು ಭೂಮಿ ಕಡೆಗೆ ಮುಖ ಮಾಡಿದ್ದು ಸೂರ್ಯನಿಗಿಂತ ಒಂದು ಶತಕೋಟಿ ಕಿಲೋಮೀಟರ್‌ ದೂರದಲ್ಲಿಯೇ 2031ರಲ್ಲಿ ನಾಶಹೊಂದುತ್ತೆ. ಹಾಗಾಗಿ ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ ಅಂತ ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply