ಗುಜರಾತ್‌ನ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ: 60 ಕೆಮಿಕಲ್‌ ಟ್ಯಾಂಕರ್‌ಗಳು ನಾಶ

masthmagaa.com:

ಗುಜರಾತಿನ ಅರಾವಳಿ ಜಿಲ್ಲೆಯ ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ದುರಂತವೊಂದು ಇಂದು ಬೆಳಗ್ಗೆ ಸಂಭವಿಸಿದೆ. ಈ ದುರಂತದಲ್ಲಿ ಕೆಮಿಕಲ್‌ ತುಂಬಿರೋ 60 ಟ್ಯಾಂಕರ್‌ಗಳು ಒಮ್ಮೆಲೆ ಧ್ವಂಸವಾಗಿವೆ. ಈ ಅಗ್ನಿ ಅವಘಡದಲ್ಲಿ ಕೋಟಿಗಟ್ಟಲೆ ನಷ್ಟ ಉಂಟಾಗಿದೆ ಎನ್ನಲಾಗಿದೆ. 10 ಅಗ್ನಿಶಾಮಕ ವಾಹಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಅಂದ್ಹಾಗೆ ಕಳೆದ 4 ತಿಂಗಳಿಂದ ಈ ಫ್ಯಾಕ್ಟರಿಯನ್ನ ಮುಚ್ಚಲಾಗಿದ್ದು, ಬೆಂಕಿ ದುರಂತಕ್ಕೆ ಕಾರಣವೇನು ಅನ್ನೋದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗ್ತಿದೆ.

-masthmagaa.com

Contact Us for Advertisement

Leave a Reply