ಭಾರತಕ್ಕೂ ಬಂದಿದೆ ಚೀನಾದ ನ್ಯೂಮೋನಿಯಾ! ಮತ್ತೊಂದು ಪ್ಯಾಂಡಮಿಕ್‌ ಫಿಕ್ಸ್?

masthmagaa.com:

ಚೀನಾದ ಮಕ್ಕಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ನಿಗೂಢ ನ್ಯುಮೋನಿಯಾ ಅಥ್ವಾ ಮೈಕೋಪ್ಲಾಸ್ಮಾ ನ್ಯುಮೋನಿಯಾ ಭಾರತದಲ್ಲಿ ಕಾಣಿಸಿಕೊಂಡಿದೆ ಅನ್ನೋ ವರದಿ ಹರಿದಾಡ್ತಾ ಇತ್ತು. ಆದ್ರೆ ಕೇಂದ್ರ ಸರ್ಕಾರ ಇದೆಲ್ಲ ಸುಳ್ಳು, ಮಿಸ್‌ಲೀಡಿಂಗ್‌ ಅಂತ ಸ್ಪಷ್ಟೀಕರಣ ನೀಡಿದೆ. ಅಂದ್ಹಾಗೆ ದೆಹಲಿಯ AIIMS ಆಸ್ಪತ್ರೆಯಲ್ಲಿ ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಪರೀಕ್ಷಿಸಿದ 67 ಸ್ಯಾಂಪಲ್‌ಗಳ ಪೈಕಿ 7 ರಲ್ಲಿ ಚೀನಾ ನ್ಯುಮೋನಿಯಾ ಖಾಯಿಲೆಯ ಸೋಂಕು ದೃಢಪಟ್ಟಿದೆ. 2022ರ ಏಪ್ರಿಲ್‌ನಿಂದಲೇ ಈ ಮಿಸ್ಟಿರಿಯಸ್ ನ್ಯುಮೋನಿಯಾಗೆ ಸಂಬಂಧಿಸಿದಂತೆ 24 ದೇಶಗಳ 45 ಪ್ರದೇಶಗಳಲ್ಲಿ ವಿಶ್ವಸಂಸ್ಥೆ ಸರ್ವೇ ನಡೆಸಿದೆ. ಸುಮಾರು 1,49,980 ಸ್ಯಾಂಪಲ್‌ಗಳ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 1,067 ಸ್ಯಾಂಪಲ್‌ಗಳು ಪಾಸಿಟಿವ್‌ ಅಂತ ಬಂದಿವೆ ಅಂತ ವರದಿಯಾಗಿತ್ತು. ಆದ್ರೆ ಕೇಂದ್ರ ಆರೋಗ್ಯ ಇಲಾಖೆ ಈ ರಿಪೋರ್ಟ್‌ನ್ನ ಸಾರಾಸಗಾಟಾಗಿ ತಳ್ಳಿ ಹಾಕಿದೆ. ಈ ಮಾಹಿತಿ ಸುಳ್ಳಾಗಿದ್ದು ಮಿಸ್‌ಲೀಡ್‌ ಮಾಡ್ತಿದೆ. ನ್ಯೂಮೋನಿಯಾ ಆದಾಗ ಈ ಮೈಕೋಪ್ಲಾಸ್ಮಾ ಬ್ಯಾಕ್ಟೀರಿಯಾ ಕಾರಣ ಆಗೋದು ತುಂಬಾ ಸಾಮಾನ್ಯ. 15ರಿಂದ 30% ನ್ಯುಮೊನಿಯಾ ಪ್ರಕರಣಗಳಿಗೆ ಇದೇ ಕಾರಣ ಆಗಿರುತ್ತೆ. ಸದ್ಯ ದೆಹಲಿ AIIMSನಲ್ಲಿ ಪತ್ತೆಯಾಗಿರೋ ನ್ಯೂಮೊನಿಯಾ ಕೇಸ್‌ಗೂ ಚೀನಾದಲ್ಲಿ ಮಕ್ಕಳಲ್ಲಿ ಹೆಚ್ಚಾಗ್ತಿರೋ ಕೇಸ್‌ಗಳಿಗೂ ಯಾವುದೇ ಸಂಬಂಧ ಇಲ್ಲ. AIMS ದೆಹಲಿ ಒಂದು ಅಧ್ಯಯನ ನಡಿಸ್ತಾ ಇತ್ತು, ಅದರಲ್ಲಿ ಈ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ನಲ್ಲಿ 7 ನ್ಯೂಮೊನಿಯಾ ಪ್ರಕರಣಗಳು ಪತ್ತೆಯಾಗಿವೆ. ಆದ್ರೆ ಅದಕ್ಕು ಇದಕ್ಕೂ ಸಂಬಂಧ ಇಲ್ಲ. 2023 ಜನವರಿಯಿಂದ ಇದುವರೆಗು AIIMS ದೆಹಲಿಯ ಮೈಕ್ರೋಬಯಾಲಜಿಯ ಲ್ಯಾಬ್‌ನಲ್ಲಿ 611 ಸ್ಯಾಂಪಲ್‌ ಟೆಸ್ಟ್‌ ಆಗಿದ್ದು ಅದ್ರಲ್ಲಿ ಯಾವುದೇ ಮೈಕೋಪ್ಲಾಸ್ಮಾ ನ್ಯೂಮೊನಿಯಾ ಪತ್ತೆಯಾಗಿಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply