ಕೇವಲ 7 ದಿನಗಳಲ್ಲಿ ಹಾಸನಾಂಬೆಗೆ ಹರಿದು ಬಂತು ಕೋಟಿ ಕೋಟಿ ರೂಪಾಯಿ ಆದಾಯ!

masthmagaa.com:

ಹಾಸನದ ಪ್ರಸಿದ್ಧ ಹಾಸನಾಂಬೆ ದರ್ಶನಕ್ಕೆ ಜನ ಸಾಗರವೇ ಹರಿದುಬರುತ್ತಿದೆ. ನವೆಂಬರ್‌ 3 ರಿಂದ ದರ್ಶನ ಪ್ರಾರಂಭವಾಗಿದ್ದು, ನವೆಂಬರ್‌ 14 ವರೆಗೆ ಇರಲಿದೆ. ಕೇವಲ 7 ದಿನಗಳ ದರ್ಶನದ ಅಂತ್ಯಕ್ಕೆ ಹಾಸನಾಂಬೆ ದೇಗುಲಕ್ಕೆ ಒಟ್ಟು 3.18 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಇದು ಕೇವಲ ನವೆಂಬರ್ 3ರಿಂದ ನವೆಂಬರ್ 10ರವರೆಗೆ ಅಂದರೆ ಏಳೇ ದಿನಗಳಲ್ಲಿ ಸಂಗ್ರಹವಾದ ಹಣ. ಇನ್ನೂ ನಾಲ್ಕು ದಿನ ಬಾಕಿ ಇರುವಾಗಲೇ ಕೋಟಿ ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿರೋದು ದಾಖಲೆಯಾಗಿದೆ. ಇದು ಹಾಸನಾಂಬೆ ದರ್ಶನೋತ್ಸವದ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚಿನ ಆದಾಯ ಸಂಗ್ರಹವಾಗಿದೆ ಅಂತ ದೇವಸ್ಥಾನ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಇತ್ತ ದೇವಿಯ ದರ್ಶನಕ್ಕೆ ನಿಂತಿದ್ದಾಗ ಪಕ್ಕದಲ್ಲಿದ್ದ ಬ್ಯಾರಿಕೇಡ್‌ನಲ್ಲಿ ವಿದ್ಯುತ್‌ ಹರಿದು 20 ಮಂದಿಗೆ ಕರೆಂಟ್‌ ಶಾಕ್‌ ಹೊಡೆದಿರೋ ಘಟನೆ ಹಾಸನಾಂಬೆ ದೇವಸ್ಥಾನದಲ್ಲಿ ನಡೆದಿದೆ. ಕೆಲವರನ್ನ ಆಸ್ಪತ್ರೆಗೆ ದಾಖಲಿಸಿದ್ದು, ಓರ್ವ ಬಾಲಕಿ ಗಂಭೀರ ಗಾಯಗೊಂಡಿದ್ದಾಳೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply