ಅಫ್ಘಾನಿಸ್ತಾನದಲ್ಲಿ ಹಸಿವಿಗೆ 8 ಮಕ್ಕಳು ಬಲಿ!

masthmagaa.com:

ಅಫ್ಘಾನಿಸ್ತಾನದ ಪಶ್ಚಿಮ ಕಾಬೂಲ್​​ನಲ್ಲಿ ಹಸಿವಿನಿಂದಾಗಿ 8 ಮಂದಿ ಮಕ್ಕಳು ಪ್ರಾಣ ಕಳ್ಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಹಜಾರಾ ಸಮುದಾಯದವರಾಗಿದ್ದಾರೆ ಅಂತ ಅಫ್ಘಾನಿಸ್ತಾನದ ಮಾಜಿ ಸಂಸದ ಹಜಿ ಮೊಹಮ್ಮದ್ ಮೊಹಖೆಕ್​​​ ಹೇಳಿದ್ದಾರೆ. ತಾಲಿಬಾನಿಗಳ ಕೈಲಿ ಅಫ್ಘನ್ ಜನತೆಯ ಜೀವನ ಮಟ್ಟ ಖಾತ್ರಿಪಡಿಸಲು ಸಾಧ್ಯವಾಗ್ತಿಲ್ಲ. ಹೀಗಾಗಿ ದೇಶದ ಹಜಾರಾ ಮತ್ತು ಶಿಯಾ ಸಮುದಾಯದ ಜನರಿಗೆ ಸಹಾಯ ಮಾಡ್ಬೇಕು ಅಂತ ಮೊಹಖೆಕ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಈ ನಡುವೆ ಅಮೆರಿಕ ತಾಲಿಬಾನಿಗಳ ಜೊತೆ ಯುದ್ಧದಲ್ಲಿ ಸೋಲು ಕಾಣ್ತು. ಇದೇ ಕಾರಣಕ್ಕೆ ಅಮೆರಿಕ ತಾಲಿಬಾನಿಗಳ ಜೊತೆ ಮಾತುಕತೆಗೆ ಮುಂದಾಯ್ತು ಅಂತ ಶಾಂತಿ ಒಪ್ಪಂದಕ್ಕೆ ಅಮೆರಿಕ ನಿಯೋಜಿಸಿದ್ದ ಪ್ರತಿನಿಧಿ ಝಾಲ್ಮೈ ಖಲೀಲ್​ಝಾದ್​ ತಿಳಿಸಿದ್ದಾರೆ.

ಮತ್ತೊಂದ್ಕಡೆ ಇತ್ತೀಚೆಗಷ್ಟೇ ತಾಲಿಬಾನಿಗಳು ಪಾಕಿಸ್ತಾನದ ಗಡಿ ಭಾಗದಲ್ಲಿರೋ ಟೋರ್ಕಮ್​​ ನಗರದಲ್ಲಿ ಗಡಿ ಓಪನ್ ಮಾಡ್ತೀವಿ ಅಂತ ಘೋಷಿಸಿತ್ತು. ಅದ್ರ ಬೆನ್ನಲ್ಲೇ ಸಾವಿರಾರು ಮಂದಿ ಅಫ್ಘನ್ ಜನರು ಗಡಿ ಭಾಗಕ್ಕೆ ಬಂದಿದ್ದಾರೆ. ಗಡಿ ಓಪನ್ ಮಾಡ್ತಿದ್ದಂತೆ ಪಾಕಿಸ್ತಾನಕ್ಕೆ ಹೋಗಿಬಿಡೋಣ ಅಂತ ಹೀಗೆ ಜನ ಸೇರಿದ್ದಾರೆ. ಆದ್ರೆ ಪಾಕಿಸ್ತಾನ ಗಡಿಯಲ್ಲಿ ದೊಡ್ಡಮಟ್ಟದಲ್ಲಿ ಭದ್ರತೆ ಏರ್ಪಡಿಸಲಾಗಿದೆ.

-masthmagaa.com

Contact Us for Advertisement

Leave a Reply