masthmagaa.com:
ದೇಶದಲ್ಲಿ ಇದುವರೆಗೆ 6 ರಾಜ್ಯಗಳ ಪೌಲ್ಟ್ರಿ (ಆಹಾರಕ್ಕಾಗಿ ಸಾಕುವ) ಪಕ್ಷಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ ಅಂತ ಕೇಂದ್ರ ಪಶುಸಂಗೋಪನಾ ಸಚಿವಾಲಯ ತಿಳಿಸಿದೆ. ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ ಮತ್ತು ಛತ್ತೀಸ್ಗಢ. ಉಳಿದಂತೆ 10 ರಾಜ್ಯದಲ್ಲಿ ಕಾಗೆ, ವಲಸೆ ಹಕ್ಕಿ ಮತ್ತು ಕಾಡು ಹಕ್ಕಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ – ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ. ಈ ಎರಡೂ ಪಟ್ಟಿಯಲ್ಲಿ ಕರ್ನಾಟಕ ಇಲ್ಲ ಅನ್ನೋದು ಸಮಾಧಾನದ ವಿಚಾರ. ಎರಡೂ ಪಟ್ಟಿಯನ್ನ ನೋಡಿದ್ರೆ ಒಟ್ಟು 11 ರಾಜ್ಯಗಳಲ್ಲಿ ಹಕ್ಕಿಜ್ವರ ಕನ್ಫರ್ಮ್ ಆದಂತಾಗಿದೆ.
-masthmagaa.com
Contact Us for Advertisement