masthmagaa.com:
ಜಗತ್ತಿನ ನಂಬರ್ 1 ಶ್ರೀಮಂತ ಜೆಫ್ ಬೆಜೋಸ್ ಮತ್ತು ನಂಬರ್ 2 ಶ್ರೀಮಂತ ಎಲಾನ್ ಮಸ್ಕ್ ನಡುವಿನ ಸ್ಪೇಸ್ ರೆಸ್ ಮತ್ತೊಂದು ಹಂತಕ್ಕೆ ಹೋಗಿದೆ. 2024ರೊಳಗೆ ಚಂದ್ರನ ಮೇಲೆ ಗಗನಯಾತ್ರಿಗಳನ್ನ ಇಳಿಸೋ ನಾಸಾದ ಯೋಜನೆಗೆ ಬೇಕಾದ ಸ್ಪೇಸ್ಶಿಪ್ ರೆಡಿ ಮಾಡಿಕೊಡುವ ಡೀಲ್ ಅನ್ನ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿ ಇತ್ತೀಚೆಗೆ ಪಡೆದುಕೊಂಡಿತ್ತು. ಈ ರೇಸ್ನಲ್ಲಿ ಜೆಫ್ ಬೆಜೋಸ್ ಅವರ ಬ್ಲೂ ಆರಿಜಿನ್ ಕೂಡ ಇತ್ತು. ಅದ್ರೆ ಕೊನೆಗೆ ಮಸ್ಕ್ ಬಾಯಿಗೆ ರಸ್ಕ್ ಬಂದು ಬಿದ್ದಿತ್ತು. ಇದೀಗ ಈ ಡೀಲ್ ಅನ್ನ ಸ್ಪೇಸ್ ಎಕ್ಸ್ಗೆ ಕೊಟ್ಟ ನಾಸಾದ ನಿರ್ಧಾರವನ್ನ ಬ್ಲೂ ಆರಿಜಿನ್ ಚಾಲೆಂಜ್ ಮಾಡಿದೆ. ನಾಸಾ ವಿರುದ್ಧ ಗವರ್ನಮೆಂಟ್ ಅಕೌಂಟೇಬಿಲಿಟಿ ಆಫೀಸ್-GAO ಮೆಟ್ಟಿಲೇರಿದೆ ಜೆಫ್ ಬೆಜೋಸ್ ಅವರ ಕಂಪನಿ. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರೋ ಎಲಾನ್ ಮಸ್ಕ್, ‘Can’t get it up (to orbit) lol‘ ಅಂತ ಪರೋಕ್ಷವಾಗಿ ಬೆಜೋಸ್ ಮತ್ತು ಅವರ ಬ್ಲೂ ಆರಿಜಿನ್ ಕಂಪನಿಯನ್ನ ಕಿಚಾಯಿಸಿದ್ದಾರೆ.
-masthmagaa.com
Contact Us for Advertisement