ವಿಶ್ವದ ಶ್ರೀಮಂತರ ನಡುವಿನ ‘ಸ್ಪೇಸ್​ ಫೈಟ್​’! ಬೆಜೋಸ್​ ಕಿಚಾಯಿಸಿದ ಮಸ್ಕ್​!

masthmagaa.com:

ಜಗತ್ತಿನ ನಂಬರ್ 1 ಶ್ರೀಮಂತ ಜೆಫ್ ಬೆಜೋಸ್​ ಮತ್ತು ನಂಬರ್​ 2 ಶ್ರೀಮಂತ ಎಲಾನ್​ ಮಸ್ಕ್ ನಡುವಿನ ಸ್ಪೇಸ್​​ ರೆಸ್​​ ಮತ್ತೊಂದು ಹಂತಕ್ಕೆ ಹೋಗಿದೆ. 2024ರೊಳಗೆ ಚಂದ್ರನ ಮೇಲೆ ಗಗನಯಾತ್ರಿಗಳನ್ನ ಇಳಿಸೋ ನಾಸಾದ ಯೋಜನೆಗೆ ಬೇಕಾದ ಸ್ಪೇಸ್​​ಶಿಪ್​ ರೆಡಿ ಮಾಡಿಕೊಡುವ ಡೀಲ್​ ಅನ್ನ ಎಲಾನ್​ ಮಸ್ಕ್ ಅವರ ಸ್ಪೇಸ್​ ಎಕ್ಸ್​ ಕಂಪನಿ ಇತ್ತೀಚೆಗೆ ಪಡೆದುಕೊಂಡಿತ್ತು. ಈ ರೇಸ್​​ನಲ್ಲಿ ಜೆಫ್ ಬೆಜೋಸ್​ ಅವರ ಬ್ಲೂ ಆರಿಜಿನ್ ಕೂಡ ಇತ್ತು. ಅದ್ರೆ ಕೊನೆಗೆ ಮಸ್ಕ್​ ಬಾಯಿಗೆ ರಸ್ಕ್ ಬಂದು ಬಿದ್ದಿತ್ತು. ಇದೀಗ ಈ ಡೀಲ್​ ಅನ್ನ ಸ್ಪೇಸ್​ ಎಕ್ಸ್​ಗೆ ಕೊಟ್ಟ ನಾಸಾದ ನಿರ್ಧಾರವನ್ನ ಬ್ಲೂ ಆರಿಜಿನ್​ ಚಾಲೆಂಜ್ ಮಾಡಿದೆ. ನಾಸಾ ವಿರುದ್ಧ ಗವರ್ನಮೆಂಟ್​ ಅಕೌಂಟೇಬಿಲಿಟಿ ಆಫೀಸ್​-GAO ಮೆಟ್ಟಿಲೇರಿದೆ ಜೆಫ್​ ಬೆಜೋಸ್​ ಅವರ ಕಂಪನಿ. ಇದಕ್ಕೆ ಟ್ವೀಟ್​ ಮೂಲಕ ಪ್ರತಿಕ್ರಿಯಿಸಿರೋ ಎಲಾನ್ ಮಸ್ಕ್​, ‘Can’t get it up (to orbit) lol‘ ಅಂತ ಪರೋಕ್ಷವಾಗಿ ಬೆಜೋಸ್ ಮತ್ತು ಅವರ ಬ್ಲೂ ಆರಿಜಿನ್ ಕಂಪನಿಯನ್ನ ಕಿಚಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply