masthmagaa.com:
ಅಫ್ಘಾನಿಸ್ತಾನ ಕಂಟ್ರೋಲ್ಗೆ ಬಂದ್ಮೇಲೆ ತಾಲಿಬಾನ್ ನಾಯಕರ ಜೊತೆಗೆ ಮೋಸ್ಟ್ ವಾಂಟೆಡ್ ಉಗ್ರರು ಕೂಡ ಕಾಬೂಲ್ನಲ್ಲಿ ಕಾಣಿಸಿಕೊಳ್ತಿದ್ದಾರೆ. ಇಷ್ಟು ದಿನ ಇದೇ ಉಗ್ರರಿಗಾಗಿ ಅಮೆರಿಕ ತಲೆ ಮೇಲೆ ಬಹುಮಾನ ಘೋಷಿಸಿ, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಾಡ್ತಿತ್ತು. ಆದ್ರೀಗ ಅದೇ ಉಗ್ರರು ಕಾಬೂಲ್ನಲ್ಲಿ ಓಡಾಡ್ತಿದ್ದಾರೆ. ಹಕ್ಕಾನಿ ಭಯೋತ್ಪಾದಕ ಸಂಘಟನೆಯ ಖಲೀಲ್ ಹಕ್ಕಾನಿ ಮಸೀದಿಯಲ್ಲಿ ನಮಾಜ್ ಮಾಡ್ತಿರೋದು, ಅನಸ್ ಹಕ್ಕಾನಿ ಅಫ್ಘನ್ ಮಾಜಿ ಅಧ್ಯಕ್ಷ ಹಮಿದ್ ಖರ್ಝೈ ಭೇಟಿಯಾಗಿರೋ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ. ಆದ್ರೆ ಅದೇ ಕಾಬೂಲ್ನಲ್ಲಿ ಅಮೆರಿಕದ 6 ಸಾವಿರ ಮಂದಿ ಸೈನಿಕರೂ ಇದ್ದಾರೆ. ಆದ್ರೆ ಆ ಉಗ್ರರನ್ನು ಮುಟ್ಟೋ ಸ್ಥಿತಿಯಲ್ಲಿ ಅಮೆರಿಕ ಇಲ್ಲ.
-masthmagaa.com
Contact Us for Advertisement