ಅಂದು ವಾಂಟೆಡ್ಸ್​​.. ಇಂದು ಎದುರಿಗಿದ್ರೂ ಮುಟ್ಟಂಗಿಲ್ಲ! ಅಮೆರಿಕದ ಸ್ಥಿತಿ ನೋಡಿ..

masthmagaa.com:

ಅಫ್ಘಾನಿಸ್ತಾನ ಕಂಟ್ರೋಲ್​​ಗೆ ಬಂದ್ಮೇಲೆ ತಾಲಿಬಾನ್ ನಾಯಕರ ಜೊತೆಗೆ ಮೋಸ್ಟ್ ವಾಂಟೆಡ್ ಉಗ್ರರು ಕೂಡ ಕಾಬೂಲ್​ನಲ್ಲಿ ಕಾಣಿಸಿಕೊಳ್ತಿದ್ದಾರೆ. ಇಷ್ಟು ದಿನ ಇದೇ ಉಗ್ರರಿಗಾಗಿ ಅಮೆರಿಕ ತಲೆ ಮೇಲೆ ಬಹುಮಾನ ಘೋಷಿಸಿ, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಾಡ್ತಿತ್ತು. ಆದ್ರೀಗ ಅದೇ ಉಗ್ರರು ಕಾಬೂಲ್​ನಲ್ಲಿ ಓಡಾಡ್ತಿದ್ದಾರೆ. ಹಕ್ಕಾನಿ ಭಯೋತ್ಪಾದಕ ಸಂಘಟನೆಯ ಖಲೀಲ್ ಹಕ್ಕಾನಿ ಮಸೀದಿಯಲ್ಲಿ ನಮಾಜ್ ಮಾಡ್ತಿರೋದು, ಅನಸ್ ಹಕ್ಕಾನಿ ಅಫ್ಘನ್ ಮಾಜಿ ಅಧ್ಯಕ್ಷ ಹಮಿದ್ ಖರ್ಝೈ ಭೇಟಿಯಾಗಿರೋ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ. ಆದ್ರೆ ಅದೇ ಕಾಬೂಲ್​​ನಲ್ಲಿ ಅಮೆರಿಕದ 6 ಸಾವಿರ ಮಂದಿ ಸೈನಿಕರೂ ಇದ್ದಾರೆ. ಆದ್ರೆ ಆ ಉಗ್ರರನ್ನು ಮುಟ್ಟೋ ಸ್ಥಿತಿಯಲ್ಲಿ ಅಮೆರಿಕ ಇಲ್ಲ.

-masthmagaa.com

Contact Us for Advertisement

Leave a Reply