masthmagaa.com:
ಇನ್ಫೋಸಿಸ್ ಆದಾಯ ತೆರಿಗೆ ಇಲಾಖೆಗೆ ಮಾಡಿಕೊಟ್ಟ ತೆರಿಗೆ ಸಲ್ಲಿಕೆಯ ಇ-ಫೈಲಿಂಗ್ ವೆಬ್ಸೈಟ್ನಲ್ಲಿ ತೊಂದ್ರೆ ಕಾಣಿಸಿಕೊಳ್ಳೋದು ಮುಂದುವರಿದಿದೆ. ಹೀಗಾಗಿ ಹಣಕಾಸು ಇಲಾಖೆ ಇನ್ಫೋಸಿಸ್ ಸಂಸ್ಥೆಯ ಎಂ.ಡಿ ಮತ್ತು ಸಿಇಒ ಆಗಿರೋ ಸಲೀಲ್ ಪಾರೆಕ್ ಅವರಿಗೆ ನಾಳೆ ಕಚೇರಿಗೆ ಬರುವಂತೆ ನೋಟಿಸ್ ನೀಡಿದೆ. ಎರಡೂವರೆ ತಿಂಗಳಾದ್ರೂ ವೆಬ್ಪೋರ್ಟಲ್ನಲ್ಲಿರೋ ಸಮಸ್ಯೆ ಯಾಕೆ ಬಗೆಹರಿದಿಲ್ಲ ಅಂತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ವಿವರಿಸಲು ಈ ಬುಲಾವ್ ನೀಡಲಾಗಿದೆ. ಜೂನ್ 7ರಂದು ಈ ಪೋರ್ಟಲ್ ಮೊದಲ ಬಾರಿಗೆ ಕೆಲಸ ಶುರು ಮಾಡಿತ್ತು. ಆದ್ರೆ ಆರಂಭದಲ್ಲೇ ತೊಂದ್ರೆ ಶುರುವಾಗಿತ್ತು. ಈಗಂತೂ ಅಗಸ್ಟ್ 21ರಿಂದ ಈ ವೆಬ್ಸೈಟ್ ಸಿಗ್ತಾನೇ ಇಲ್ಲ.
-masthmagaa.com
Contact Us for Advertisement