ಇನ್ಫೋಸಿಸ್ ಮಾಡಿಕೊಟ್ಟ ವೆಬ್​ಸೈಟ್​ನಲ್ಲಿ ದೋಷ: ನಿರ್ಮಲಾ ಸೀತಾರಾಮನ್ ಬುಲಾವ್

masthmagaa.com:

ಇನ್ಫೋಸಿಸ್​ ಆದಾಯ ತೆರಿಗೆ ಇಲಾಖೆಗೆ ಮಾಡಿಕೊಟ್ಟ ತೆರಿಗೆ ಸಲ್ಲಿಕೆಯ ಇ-ಫೈಲಿಂಗ್ ವೆಬ್​ಸೈಟ್​ನಲ್ಲಿ ತೊಂದ್ರೆ ಕಾಣಿಸಿಕೊಳ್ಳೋದು ಮುಂದುವರಿದಿದೆ. ಹೀಗಾಗಿ ಹಣಕಾಸು ಇಲಾಖೆ ಇನ್ಫೋಸಿಸ್ ಸಂಸ್ಥೆಯ ಎಂ.ಡಿ ಮತ್ತು ಸಿಇಒ ಆಗಿರೋ ಸಲೀಲ್ ಪಾರೆಕ್​ ಅವರಿಗೆ ನಾಳೆ ಕಚೇರಿಗೆ ಬರುವಂತೆ ನೋಟಿಸ್ ನೀಡಿದೆ. ಎರಡೂವರೆ ತಿಂಗಳಾದ್ರೂ ವೆಬ್​ಪೋರ್ಟಲ್​ನಲ್ಲಿರೋ ಸಮಸ್ಯೆ ಯಾಕೆ ಬಗೆಹರಿದಿಲ್ಲ ಅಂತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ಗೆ ವಿವರಿಸಲು ಈ ಬುಲಾವ್ ನೀಡಲಾಗಿದೆ. ಜೂನ್ 7ರಂದು ಈ ಪೋರ್ಟಲ್ ಮೊದಲ ಬಾರಿಗೆ ಕೆಲಸ ಶುರು ಮಾಡಿತ್ತು. ಆದ್ರೆ ಆರಂಭದಲ್ಲೇ ತೊಂದ್ರೆ ಶುರುವಾಗಿತ್ತು. ಈಗಂತೂ ಅಗಸ್ಟ್ 21ರಿಂದ ಈ ವೆಬ್​ಸೈಟ್ ಸಿಗ್ತಾನೇ ಇಲ್ಲ.

-masthmagaa.com

Contact Us for Advertisement

Leave a Reply