masthmagaa.com:
ಕಾಬೂಲ್ನಲ್ಲಿರೋ ಹೋಟೆಲ್ಗಳಿಂದ ಅದ್ರಲ್ಲೂ ಫೇಮಸ್ ಆಗಿರೋ ಸೆರೆನಾ ಹೋಟೆಲ್ನಿಂದ ಆದಷ್ಟು ಬೇಗ ಜಾಗ ಖಾಲಿ ಮಾಡಿ ಅಂತ ಅಮೆರಿಕ ಮತ್ತು ಬ್ರಿಟನ್ ತನ್ನ ಪ್ರಜೆಗಳಿಗೆ ಸೂಚಿಸಿದೆ. ಅಂದಹಾಗೆ ಈ ಸೆರೆನಾ ಐಷಾರಾಮಿ ಹೋಟೆಲ್ ಆಗಿದ್ದು, ತಾಲಿಬಾನ್ ಟೇಕೋವರ್ಗೂ ಮುನ್ನ ವಿದೇಶಿಗರು ಹೋದ್ರೆ ಅಲ್ಲೇ ಹೆಚ್ಚಾಗಿ ತಂಗುತ್ತಿದ್ರು. ಆದ್ರೀಗ ಅಲ್ಲಿಗೆ ಹೋಗ್ಬೇಡಿ ಅಂತ ಅಮೆರಿಕ, ಬ್ರಿಟನ್ ತಿಳಿಸಿದೆ. ಅಂದಹಾಗೆ ಈ ಹೋಟೆಲ್ ಮೇಲೆ ಈಗಾಗಲೇ ಎರಡೆರಡು ಬಾರಿ ಮೂಲಭೂತವಾದಿಗಳ ದಾಳಿಗೆ ತುತ್ತಾಗಿತ್ತು. ಆದ್ರೆ ಆಗ ದಾಳಿ ನಡೆಸಿದ್ದಿದ್ದು ತಾಲಿಬಾನಿಗಳೇ.. ಆದ್ರೆ ಈಗ ಯಾವ ಅಪಾಯ ಎದುರಾಗಿದೆ ಅನ್ನೋದನ್ನ ಅಮೆರಿಕ ಆಗಲೀ, ಬ್ರಿಟನ್ ಆಗಲೀ ಸ್ಪಷ್ಟವಾಗಿ ಹೇಳಿಲ್ಲ.
-masthmagaa.com
Contact Us for Advertisement