masthmagaa.com:
ಬ್ಯಾಂಕ್ ಸಿಬ್ಬಂದಿಯೇ ಗ್ರಾಹಕರ ಅಕೌಂಟಿಗೆ ತೂತು ಕೊರೆದು ದುಡ್ಡು ಕೀಳಲು ಟ್ರೈ ಮಾಡಿದ ಘಟನೆ ನಡೆದಿದೆ. ಘಟನೆ ಸಂಬಂಧ HDFC ಬ್ಯಾಂಕಿನ 3 ಉದ್ಯೋಗಿಗಳೂ ಸೇರಿದಂತೆ 12 ಮಂದಿಯನ್ನ ಬಂಧಿಸಲಾಗಿದೆ. ಮಾಸ್ಟರ್ಮೈಂಡ್ಗಾಗಿ ಹುಡುಕಾಟ ನಡೆಸ್ತಿದ್ದಾರೆ. ಇವ್ರು ಭಾರೀ ದುಡ್ಡಿದ್ದ NRIಗಳ ಅಕೌಂಟ್ ಡೀಟೇಲ್ ತಗೊಂಡು ಮೋಸದಿಂದ ಚೆಕ್ ಬುಕ್ ತಗೊಂಡು, ದುಡ್ಡು ವಿಡ್ರಾ ಮಾಡೋಕೆ ಟ್ರೈ ಮಾಡಿದ್ದರು. NRI ಖಾತೆದಾರರ ಮೊಬೈಲ್ ಫೋನ್ ಗಳನ್ನ ಕೂಡ ಡೂಪ್ಲಿಕೇಟ್ ಮಾಡಿಕೊಂಡಿದ್ದರು. ಆದ್ರೆ ಬ್ಯಾಂಕ್ ಗೆ ತನ್ನ ಸಿಸ್ಟಂ ಒಳಗೇನೇ ಏನೋ ಕಳ್ಳಾಟ ನಡೀತಿದೆ ಅಂತ ಗೊತ್ತಾಗಿ ಕಂಪ್ಲೇಂಟ್ ಕೊಟ್ಟಿದ್ದರು. ಈಗ ದಿಲ್ಲಿ ಪೊಲೀಸರ ಸೈಬರ್ ಘಟಕದ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಬೇಲಿಯೊಳಗಿನ ಕಳ್ಳರನ್ನ ಹಿಡಿದಾಕಿದ್ದಾರೆ.
-masthmagaa.com
Contact Us for Advertisement