masthmagaa.com:
ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತೊಮ್ಮೆ ಬ್ಯಾಡ್ಮಿಂಟನ್ ಲೋಕದ ಗಮನ ಸೆಳೆದಿದ್ದಾರೆ. ಸಿಂಗಪೂರ್ನಲ್ಲಿ ನಡೆದ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭರ್ಜರಿ ಜಯಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಸಿಂಧು ಇದೇ ಮೊದಲ ಬಾರಿಗೆ ಸಿಂಗಾಪುರ ಟೂರ್ನಿಯಲ್ಲಿ ಗೆದ್ದುಬೀಗಿದ್ದಾರೆ. ಇದರ ಜೊತೆಗೆ ಈ ವರ್ಷದ ಮೊದಲ ಸೂಪರ್ 500 ಟ್ರೋಫಿ ಗೆಲ್ಲುವಲ್ಲಿ ಕೂಡ ಸಿಂಧು ಯಶಸ್ವಿಯಾಗಿದ್ದಾರೆ. ಚೀನಾದ ಆಟಗಾರ್ತಿ ವಾಂಗ್ ಝಿ ಯಿ ವಿರುದ್ಧ 21-9, 11-21, 21-15, ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಇನ್ನು ಚಾಂಪಿಯನ್ ಸಿಂಧುಗೆ ಪ್ರಧಾನಿ ಮೋದಿ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
-masthmagaa.com
Contact Us for Advertisement