ಕೂಲ್‌ ಡ್ರಿಂಕ್‌ಗೆ ಬ್ರಾಂಡ್‌ ಅಂಬಾಸಿಡರ್‌ ಆದ್ರು ರಾಕಿಬಾಯ್‌! ಬೇಸಿಗೆಯಲ್ಲಿ ಗ್ರಾಹಕರನ್ನ ಸೆಳೆಯೋಕೆ ‌ʻಮಾಸ್ಟರ್‌ʼ ಪ್ಲಾನ್!

masthmagaa.com:

ಯಶಸ್ಸಿನ ಅಲೆಯಲ್ಲಿ ತೇಲ್ತಾ ಇರೋ ರಾಕಿಂಗ್‌ ಸ್ಟಾರ್‌ ಯಶ್‌ ಈಗ ಮೋಸ್ಟ್‌ ಪಾಪ್ಯುಲರ್‌ ಕೂಲ್‌ಡ್ರಿಂಕ್ ಪೆಪ್ಸಿಗೆ ಬ್ರಾಂಡ್‌ ಅಂಬಾಸಿಡರ್‌ ಆಗಿದಾರೆ. ಪೆಪ್ಸಿ ಇಂಡಿಯಾ ಘಟಕದ ಬ್ರಾಂಡ್‌ ಅಂಬಾಸಿಡರ್‌ ಆಗಿ ಯಶ್‌ ಕಾಣಿಸಿಕೊಂಡಿದ್ದು ಈ ವಿಚಾರವನ್ನ ಯಶ್‌ ಹಾಗೂ ಪೆಪ್ಸಿ ಇಂಡಿಯಾ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಪೆಪ್ಸಿಕೋ ಇಂಡಿಯಾದ ಪೆಪ್ಸಿ ಕೋಲಾ ವಿಭಾಗದ ಮುಖ್ಯಸ್ಥೆ ಸೌಮ್ಯಾ ರಾಥೋರ್, ಯಶ್ ಅವರೊಂದಿಗೆ ಕೈಜೋಡಿಸೋಕೆ ನಮಗೆ ರೋಮಾಂಚನ ಆಗ್ತಿದೆ. ಯಶ್ ಯುವಜನರೊಂದಿಗೆ ಬಲವಾದ ಸಂಪರ್ಕ ಮತ್ತು ಅವರ ಮೇಲೆ ಪ್ರಭಾವ ಬೀರುತ್ತಾರೆ ಅಂತ ಹೇಳಿದ್ದಾರೆ. ಅಂತೂ ಬೇಸಿಗೆ ಹತ್ತಿರ ಬರ್ತಿದ್ದಂತೆ ರಾಕಿಬಾಯ್‌ ಅವರ ಮೂಲಕ ಗ್ರಾಹಕರನ್ನ ಸೆಳೆಯೋಕೆ ಪೆಪ್ಸಿ ಮಾಸ್ಟರ್‌ ಪ್ಲಾನ್‌ ಮಾಡಿದೆ.

-masthmagaa.com

Contact Us for Advertisement

Leave a Reply