ತನ್ಮೇಲೆ ತಾನೆ ಅಟ್ಯಾಕ್‌ ಮಾಡ್ಕೋಳೋಕೆ ರಷ್ಯಾ ಪ್ಲ್ಯಾನ್‌!

masthmagaa.com:

ರಷ್ಯಾ ತನ್ನ ದೇಶದ ನಗರಗಳ ಮೇಲೆ ತಾನೆ ದಾಳಿ ಮಾಡ್ಕೊಂಡು ನಂತ್ರ ಅದನ್ನ ಯುಕ್ರೇನ್‌ ಮಾಡ್ತು ಅಂತ ಕತೆ ಕಟ್ಟೋಕೆ ನೋಡ್ತಿದೆ ಅಂತ ರಷ್ಯಾದಿಂದ ಗಡಿಪಾರದ ರಾಜಕಾರಣಿ ಇಲ್ಯಾ ಪೊನೊಮರೆವ್‌ ಹೇಳಿದ್ದಾರೆ. ಯುದ್ಧ ಶುರುವಾಗಿ ಒಂದು ತಿಂಗಳಾದ್ರು ಯುಕ್ರೇನ್‌ ಸೋಲಿಸುವಲ್ಲಿ ವಿಫಲ ಆಗಿರೋ ರಷ್ಯಾ ಇದ್ರಿಂದ ತನ್ನ ದಾಳಿಯನ್ನ ಸಮರ್ಥಿಸಿಕೊಳ್ಳೋಕೆ ನೋಡ್ತಿದೆ ಅಂತ ಅವ್ರು ಹೇಳಿದ್ದಾರೆ. ಇನ್ನು ಮುಂದುವರೆದ ಅವ್ರು ರಷ್ಯಾದ ಗುಪ್ತಚರ ಇಲಾಖೆ ಎಫ್‌ಎಸ್‌ಬಿ, ಟೆರೆರಿಸ್ಟ್‌ ಅಟ್ಯಾಕ್‌ ರೀತಿ ಈ ಯೋಜನೆಯನ್ನ ಸಿದ್ಧಪಡಿಸಿದ್ದು, ಕೆಮಿಕಲ್‌ ಮತ್ತು ಆಯಿಲ್ ಪ್ಲ್ಯಾಂಟ್‌ಗಳ ಮೇಲೆ ಈ ದಾಳಿಯನ್ನ ನಡೆಸಲಿದೆ. ಅದ್ರಿಂದ ಸಾವಿರಾರು ಜನ ಸಾಯಲಿದ್ದಾರೆ ಆಗ ರಷ್ಯಾ ಯುಕ್ರೇನ್‌ ಒಳಗೆ ಸೇನೆ ನುಗ್ಗಿಸಿದನ್ನ ಸಮರ್ಥಿಸಿಕೊಳ್ಳಬಹುದು ಅಂತ ಅವ್ರು ಹೇಳಿದ್ದಾರೆ. ಇಲ್ಯಾ ಪನೊಮರೆವ್‌ ರಷ್ಯಾದ ಮಾಜಿ ರಾಜಕಾರಣಿ ಆಗಿದ್ದು ಈ ಹಿಂದೆ 2014 ರಲ್ಲಿ ರಷ್ಯಾ ಕ್ರೈಮಿಯಾವನ್ನ ಸೇರ್ಸ್ಕೊಂಡಾಗ ಅದರ ವಿರುದ್ಧ ಒಬ್ರೇ ಮತ ಚಲಾಯಿಸಿದ್ರು. ಆ ನಂತರ ಗಡಿಪಾರಾಗಿದ್ರು.

-masthmagaa.com

Contact Us for Advertisement

Leave a Reply