ಬೆಳಗಾವಿಯ ಅಮಾನವೀಯ ಕೃತ್ಯ: ರಾಜ್ಯ ಸರ್ಕಾರಕ್ಕೆ NHRC ನೋಟಿಸ್‌!

masthmagaa.com:

ಬೆಳಗಾವಿಯಲ್ಲಿ ಮಹಿಳೆಯೊಬ್ಬಳನ್ನ ಬೆತ್ತಲೆಗೊಳಿಸಿ, ಥಳಿಸಿ, ಮೆರವಣಿಗೆ ಮಾಡಿರೋ ಹೀನ ಕೃತ್ಯಕ್ಕೆ ಇದೀಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ರಿಯಾಕ್ಟ್‌ ಮಾಡಿದೆ. ಡಿಸೆಂಬರ್‌ 15 ರಂದು ಕರ್ನಾಟಕ ಸರ್ಕಾರ ಮತ್ತು ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೆ NHRC ನೋಟಿಸ್‌ ನೀಡಿದೆ. ಈ ರೀತಿಯ ಕೃತ್ಯದಿಂದ, ಸಂತ್ರಸ್ತೆಯ ಜೀವನ ಮತ್ತು ಘನತೆಯ ಹಕ್ಕಿನ ಉಲ್ಲಂಘನೆ ಆಗಿರೋದು ಕ್ಲಿಯರ್‌ ಆಗಿದೆ ಅಂತ NHRC ನೋಟಿಸ್‌ನಲ್ಲಿ ತಿಳಿಸಿದೆ. ಅಂದ್ಹಾಗೆ ಈ ಘಟನೆ ಬೆಳಗಾವಿಯ ವಂಟಮೂರಿಯಲ್ಲಿ ಡಿಸೆಂಬರ್‌ 11 ರಂದು ನಡಿದಿತ್ತು. ಪ್ರೀತಿಸಿ ಓಡ್ಹೋಗಿರೋ ಕಾರಣಕ್ಕೆ ಯುವತಿಯ ಮನೆವ್ರು ಸೇರಿ ಯುವಕನ ತಾಯಿಯನ್ನ ಬೆತ್ತಲೆಗೊಳಿಸಿ ಅಮಾನವೀಯವಾಗಿ ನಡ್ಕೊಂಡಿದ್ರು. ಇನ್ನು ಶನಿವಾರ ಕೇಂದ್ರದ ಬಿಜೆಪಿ ನಿಯೋಗ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತ ಮಹಿಳೆಯ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಕ್ರಾ ಒಳಗೊಂಡ ನಿಯೋಗ ಆ ಬಳಿಕ ಘಟನಾ ಸ್ಥಳ ವಂಟಮೂರಿ ಹಾಗೂ ಕಾಕತಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ರಕರಣ ಸಂಬಂಧ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ಕರೆ ಕೊಡುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಂಜೆಯೇ ಮಹಿಳೆಗೆ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದಲೂ ಐವತ್ತು ಸಾವಿರ ರೂಪಾಯಿ ಪರಿಹಾರ ಘೋಷಿಸಿಲಾಗಿದೆ.

-masthmagaa.com

Contact Us for Advertisement

Leave a Reply