ಮಂಡ್ಯದಲ್ಲಿ ಅಭಿವಾ ಭರ್ಜರಿ ಬೀಗರ ಔತಣಕೂಟ: ಮೆನು ಹೇಗಿದೆ ಗೊತ್ತಾ?

masthmagaa.com:

ಇಂದು ಅವಿವಾ ಮತ್ತು ಅಭಿಷೇಕ್‌ ಮದುವೆಯ ಬೀಗರ ಔತಣಕೂಟ ಕಾರ್ಯಕ್ರಮ ಮಂಡ್ಯದಲ್ಲಿ ಜೋರಾಗಿ ನಡೀತಾ ಇದೆ. ಸುಮಾರು 1 ಲಕ್ಷಕ್ಕೂ ಅಧಿಕ ಜನ ಬರುವ ಸಾಧ್ಯತೆ ಇದೆ, ಸುಮಾರು 7 ಟನ್‌ ಅಷ್ಟು ಮಟನ್‌, 7 ಟನ್‌ ಚಿಕನ್‌, 3ಟನ್‌ ಬೋಟಿ ತರಿಸಿರೋದಾಗಿ ಕೆಟರಿಂಗ್‌ ಸರ್ವಿಸ್‌ನ ಮುಖ್ಯಸ್ಥ ಹೇಳಿದ್ದಾರೆ.

ಅಭಿಷೇಕ್‌ ಮತ್ತು ಅವಿವಾ ಅವರದ್ದು ಲವ್‌ ಮ್ಯಾರೇಜ್‌. ಹಲವು ವರ್ಷಗಳ ಕಾಲ ಪ್ರೀತಿ ಮಾಡಿದ್ದ ಈ ಜೋಡಿ ಜೂನ್‌ 5ಕ್ಕೆ ಹಸೆಮಣೆ ಏರೀದ್ರು. ಜೂನ್ 7ರಂದು ಭರ್ಜರಿಯಾಗಿ ಆರತಕ್ಷತೆ ಸಮಾರಂಭ ಕೂಡ ನಡೆದಿತ್ತು. ಇಂದು (ಜೂನ್‌ 16) ಮಂಡ್ಯದಲ್ಲಿ ಬಾಡೂಟ ಪ್ರೋಗ್ರಾಮ್‌ ಅನ್ನ ತಮ್ಮ ಅಭಿಮಾನಿಗಳಿಗೆ ಏರ್ಪಡಿಸಿದ್ದಾರೆ. ಈ ಪ್ರೊಗ್ರಾಮ್‌ನಲ್ಲಿ ಅವಿವಾ ರೇಷ್ಮೆ ಸೀರೆಯಲ್ಲಿ ಮಿಂಚಿದ್ರೆ ಅಭಿಷೇಕ್‌ ಪಕ್ಕಾ ಮಂಡ್ಯ ಸ್ಟೈಲ್‌ನಲ್ಲಿ ಪಂಚೆ ಉಟ್ಟು ಮಿಂಚಿದ್ದಾರೆ.

-masthmagaa.com

Contact Us for Advertisement

Leave a Reply