ಹರ್ಷಿಕಾ ಪೂಣಚ್ಚ – ಭುವನ್ ಪೊನ್ನಣ್ಣ ಮದುವೆ ಆಗಸ್ಟ್ 24ಕ್ಕೆ ಫಿಕ್ಸ್?

masthmagaa.com:

ನಟಿ ಹರ್ಷಿಕಾ ಪೂಣಚ್ಚ ಮತ್ತು ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ತುಂಬಾ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ವಿವಾಹವಾಗುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಆದ್ರೆ ಈ ಇಬ್ಬರಲ್ಲಿ ಯಾರೊಬ್ಬರೂ ಸಹ ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ಕೊಟ್ಟಿಲ್ಲ.

ಕೆಲವು ದಿನಗಳ ಹಿಂದಷ್ಟೇ ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯ ಸರಳವಾಗಿ ನಡೆದಿದ್ದು, ಎರಡೂ ಕುಟುಂಬದ ಸದಸ್ಯರು ಮತ್ತು ಆತ್ಮೀಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಮದುವೆ ಆಮಂತ್ರಣ ಪತ್ರಿಕೆ ಕೂಡ ಸಿದ್ಧವಾಗಿದ್ದು, ಕೊಡಗು ಭಾಷೆಯಲ್ಲೇ ಆಮಂತ್ರಣ ಪತ್ರಿಕೆಯನ್ನ ಮುದ್ರಿಸಲಾಗಿದೆ. ಈ ಆಮಂತ್ರಣ ಪತ್ರಿಕೆ ಇವರಿಬ್ಬರದ್ದೇ ಅಂತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಆಗಸ್ಟ್ 24ಕ್ಕೆ ಮದುವೆ ಅಂತ ನಮೂದಿಸಲಾಗಿದೆ.

ಕೊಡಗು ಸಂಪ್ರದಾಯದಂತೆಯೇ ಇಬ್ಬರೂ ಮದುವೆ ಆಗುತ್ತಿದ್ದು, ಮುಹೂರ್ತ ಕಾರ್ಯಗಳು ಬಹುತೇಕವಾಗಿ ಕೊಡಗಿನಲ್ಲೇ ನಡೆಯತ್ತೆ ಎಂಬ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply