ಕೋವಿಡ್ ಲಸಿಕೆ ಪಡೆದುಕೊಂಡ ನಟಿ ಮಾಲಾಶ್ರೀ!!

ಸ್ಯಾಂಡಲ್ ವುಡ್ ನಟಿ ಮಾಲಾಶ್ರೀ ಕೊವಿಡ್ ಲಸಿಕೆ ಪಡೆದುಕೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನ ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಮಾಲಾಶ್ರೀ ಅವರ ಪತಿ ನಿರ್ಮಾಪಕ ಕೋಟಿ ರಾಮು ಕೊರೊನಾದಿಂದ ಕೊನೆಯುಸಿರೆಳೆದರು. ಕೊರೊನಾ ವೈರಸ್‌ಗೆ ತುತ್ತಾಗಿದ್ದ ರಾಮು ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನೇನು ಗುಣಮುಖ ಆಗುತ್ತಾರೆ ಎನ್ನುವಾಗಲೇ ಇಹಲೋಕ ತ್ಯಜಿಸಿದರು. ಪತಿಯ ನೆನಪಿನಲ್ಲೇ ಬದುಕುತ್ತಿರುವ ನಟಿ ಮಾಲಾಶ್ರೀ ಈಗ ಕೊರೊನಾ ಲಸಿಕೆ ಪಡೆದಿದ್ದಾರೆ.
ಕೋವಿಡ್ ಮೊದಲ ಡೋಸ್ ಪಡೆದ ಮಾಲಾಶ್ರೀ ಸಾಮಾಜಿಕ ಜಾಲತಾಣದಲ್ಲಿ “ವ್ಯಾಕ್ಸಿನೇಟೆಡ್” ಎಂದು ಬರೆದುಕೊಂಡಿದ್ದಾರೆ. ಇತ್ಹೇಚೆಗೆ ಬಹುತೇಕ ಕಲಾವಿದರು ಸಹ ಲಸಿಕೆ ಪಡೆದಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅನಂತ್ ನಾಗ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಅನೇಕರು ಕೊರೊನಾ ಲಸಿಕೆ ಪಡೆದಿದ್ದಾರೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪರಭಾಷೆ ಕಲಾವಿದರು ಸಹ ಲಸಿಕೆ ಹಾಕಿಸಿಕೊಂಡು, ಅಭಿಮಾನಿಗಳಿಗೂ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
Contact Us for Advertisement

Leave a Reply