ಮತ್ತೊಂದು ಮೈಲಿಗಲ್ಲು ಸಾಧಿಸಿದ ಆದಿತ್ಯ ಎಲ್1 ಮಿಷನ್‌!

masthmagaa.com:

ಸೂರ್ಯನ ಅಧ್ಯಯನಕ್ಕೆ ಕಳಿಸಲಾಗಿರುವ ಆದಿತ್ಯ ಎಲ್ 1 ಮಿಷನ್‌ನ ಬಾಹ್ಯಾಕಾಶ ನೌಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.ಇದೀಗ ಆದಿತ್ಯ ಎಲ್ 1 ಭೂಮಿಯಿಂದ 9.2 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿದೆ ಅಂತ ಇಸ್ರೋ ಹೇಳಿದೆ. ಈ ಮೂಲಕ ಭೂಮಿಯ ಪ್ರಭಾವಂದ ವಲಯದಿಂದ ಯಶಸ್ವಿಯಾಗಿ ಪಾರಾಗಿದೆ. ಈಗ ಸೂರ್ಯನ ಲಾಗ್ರೇಂಜ್‌ ಪಾಯಿಂಟ್ 1 (L1) ಕಡೆಗೆ ತನ್ನ ಮಾರ್ಗವನ್ನು ನ್ಯಾವಿಗೇಟ್ ಮಾಡುತ್ತಿದೆ ಅಂತ ಇಸ್ರೋ ತಿಳಿಸಿದೆ. ಇನ್ನು ಸತತ ಎರಡನೇ ಬಾರಿಗೆ ಭೂಮಿಯ ಪ್ರಭಾವದಿಂದ ಹೊರಗೆ ಬಾಹ್ಯಾಕಾಶ ನೌಕೆಯನ್ನು ಇಸ್ರೋ ಕಳುಹಿಸಿದೆ. ಮೊದಲ ಸಲ ಮಾರ್ಸ್ ಆರ್ಬಿಟರ್ ಮಿಷನ್ ಭೂಮಿಯ ಪ್ರಭಾವ ವಲಯ ದಾಟಿ ಹೋಗಿತ್ತು.

-masthmagaa.com

Contact Us for Advertisement

Leave a Reply