ಅಫ್ಘಾನಿಸ್ತಾನದಲ್ಲಿ ನಾಗರಿಕ ಯುದ್ಧ ಸಾಧ್ಯತೆ: ಅಮೆರಿಕದ ಹಿರಿಯ ಸೇನಾಧಿಕಾರಿ

masthmagaa.com:

ಅಫ್ಘಾನಿಸ್ತಾನದಲ್ಲಿ ನಾಗರಿಕ ಯುದ್ಧ ಸಂಭವಿಸೋ ಎಲ್ಲಾ ಲಕ್ಷಣ ಕಾಣ್ತಾ ಇದೆ ಅಂತ ಅಮೆರಿಕದ ಜಾಯಿಂಟ್ ಚೀಫ್ ಆಫ್ ಸ್ಟಾಫ್​​ನ ಚೇರ್​​ಮನ್ ಮಾರ್ಕ್​ ಮಿಲ್ಲೇ ಹೇಳಿದ್ದಾರೆ. ತಾಲಿಬಾನ್ ಸರ್ಕಾರ ರಚಿಸಿ, ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮಿಲಿಟರಿ ಲೆಕ್ಕಾಚಾರದ ಪ್ರಕಾರ ಸದ್ಯದ ಪರಿಸ್ಥಿತಿ ಗಮನಿಸಿದ್ರೆ ನಾಗರಿಕ ಯುದ್ಧ ಶುರುವಾಗೋ ಸಾಧ್ಯತೆ ಇದೆ. ಒಂದ್ವೇಳೆ ಹಾಗೇನಾದ್ರೂ ಆದ್ರೆ ಅಲ್ಲಿ ಐಎಸ್​ ಸೇರಿದಂತೆ ಉಗ್ರ ಸಂಘಟನೆಗಳು ಮತ್ತೆ ಬೆಳೆಯೋ ಸಾಧ್ಯತೆ ಇರುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply