ತಾಲಿಬಾನ್ ಸಾಮ್ರಾಜ್ಯದಲ್ಲಿ ಆತಂಕದಲ್ಲಿ ಮಹಿಳಾ ಜಡ್ಜ್​ಗಳು!

masthmagaa.com:

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರು ಹೆದರಿಕೆಯಲ್ಲೇ ಬದುಕುವಂತಾಗಿದೆ. ಅದ್ರಲ್ಲೂ ಹಿಂದಿನ ಸರ್ಕಾರ ಇದ್ದಾಗ ಜಡ್ಜ್​ ಆಗಿದ್ದ ನೂರಾರು ಮಂದಿ ಮಹಿಳೆಯರು ಭಯ ಮತ್ತು ತಲೆಮರೆಸಿಕೊಂಡು ಬದುಕುತ್ತಿದ್ದಾರೆ. ಇವರು ತಮ್ಮ ಅವಧಿಯಲ್ಲಿ ಹಲವು ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದ್ರು. ಆದ್ರೆ ತಾಲಿಬಾನಿಗಳು ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಕೈದಿಗಳನ್ನ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಮೊದಲು ಜಡ್ಜ್ ಆಗಿದ್ರೂ ಕೂಡ ಈಗ ಅವರು ಮನೆಯಿಂದ ಹೊರಹೋಗುವಂತಿಲ್ಲ ಅಂತ ತಾಲಿಬಾನಿಗಳು ಸೂಚಿಸಿದ್ದಾರೆ. ಹೀಗಾಗಿ ಜೈಲಿಂದ ಬಿಡುಗಡೆಯಾಗಿರೋ ಕೈದಿಗಳು ಅವರ ಮೇಲೆ ಟಾರ್ಗೆಟ್ ಮಾಡೋ ಭೀತಿ ಅವರನ್ನು ಆವರಿಸಿದೆ.

-masthmagaa.com

Contact Us for Advertisement

Leave a Reply