ಆಫ್ಘನ್‌ ಆಟಗಾರರಿಗೆ IPL ಆಡದಂತೆ ತಾಲಿಬಾನ್‌ ನಿರ್ಬಂಧ!

masthmagaa.com:

ಆಫ್ಘನ್‌ ಕ್ರಿಕೆಟ್‌ ಆಟಗಾರರಾದ ಮಜೀಬ್‌ ಉರ್‌ ರಹಮಾನ್‌, ಫಜಲ್‌ಹಕ್‌ ಫರೂಕಿ ಹಾಗೂ ನವೀಲ್‌ ಉಲ್‌ ಹಕ್‌ IPL ಆಡದಂತೆ ಆಫ್ಘನ್‌ ಕ್ರಿಕೆಟ್‌ ಬೋರ್ಡ್‌ (ACB) ನಿರ್ಭಂದ ಹೇರಿದೆ. ದೇಶದ ಪರವಾಗಿ ಆಡೋದರ ಬದಲು ವೈಯಕ್ತಿಕ ಆಸಕ್ತಿಯನ್ನ ಪ್ರಿಫರ್‌ ಮಾಡಿ ವಿದೇಶಿ ಕಮರ್ಷಿಯಲ್‌ ಲೀಗ್‌ಗಳನ್ನ ಆಡ್ತಾರೆ. ಹಾಗಾಗಿ ಈ ಶಿಸ್ತಿನ ಕ್ರಮ ತೆಗೆದುಕೊಳ್ಳಾಗ್ತಿದೆ ಅಂತ ACB ಹೇಳಿದೆ. ತಾಲಿಬಾನ್‌ ಕೈಯಲ್ಲಿರೋ ACB.. 2 ವರ್ಷಗಳಿಗೆ ಈ ಮೂವರಿಗೆ ವಿದೇಶಿ ಟೂರ್ನಮೆಂಟ್‌ ಆಡೋಕೆ NOC ಕೊಡಲ್ಲ ಅಂತೇಳಿದೆ. ಅಲ್ಲದೆ 2024ರ ವಾರ್ಷಿಕ ಕಾಂಟ್ರಾಕ್ಟನ್ನ ಕೂಡ ಡಿಲೇ ಮಾಡಿದೆ.

-masthmagaa.com

Contact Us for Advertisement

Leave a Reply