ನೆರೆ ರಾಷ್ಟ್ರಗಳ ಬಳಿ ವಿನಮ್ರವಾಗಿ ವಿನಂತಿ ಮಾಡಿದ ತಾಲಿಬಾನ್‌! ಏನದು?

masthmagaa.com:

ಇರಾನ್‌ ಹಾಗೂ ಅಫ್ಘಾನಿಸ್ತಾನದ ಗಡಿಯಲ್ಲಿ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಿಂದ ಉಭಯ ದೇಶಗಳ ನಡುವಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದ ರೀತಿಯಿದೆ. ಇದೀಗ ರಾಜತಾಂತ್ರಿಕ ಮಾರ್ಗಗಳ ಮೂಲಕ ದ್ವಿಪಕ್ಷೀಯ ಸಮಸ್ಯೆಗಳನ್ನ ಪರಿಹರಿಸಲು ಇರಾನ್‌ಗೆ ತಾಲಿಬಾನ್‌ ಸರ್ಕಾರ ಕರೆ ನೀಡಿದೆ. ನಮ್ಮ ನೆರೆ ರಾಷ್ಟ್ರಗಳ ಜೊತೆಗಿನ ಸಂಬಂಧಗಳು ಹದಗೆಡೋದನ್ನ ನಾವು ಬಯಸೋದಿಲ್ಲ. ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮಸ್ಯೆಗಳ್ನನ ಬಗೆಹರಿಸಿಕೊಳ್ಳಲು, ಇರಾನ್‌ ಸೇರಿದಂತೆ ಎಲ್ಲಾ ನಮ್ಮ ನೆರೆ ರಾಷ್ಟ್ರಗಳ ಬಳಿ ನಾವು ರಿಕ್ವೆಸ್ಟ್‌ ಮಾಡ್ತೇವೆ ಅಂತ ತಾಲಿಬಾನ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಪ ವಕ್ತಾರ ಹಫೀಜ್ ಜಿಯಾ ಅಹ್ಮದ್ ಹೇಳಿದ್ದಾರೆ. ಸದ್ಯ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾವುದೇ ಉದ್ವಿಗ್ನತೆಯಿಲ್ಲ ಅಂತ ಹಫೀಜ್‌ ತಿಳಿಸಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಅಫ್ಘಾನಿಸ್ತಾನ ಹಾಗೂ ಇರಾನ್‌ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಇರಾನ್‌ ಗಡಿ ಸಿಬ್ಬಂದಿ ಹಾಗೂ ಅಫ್ಘಾನಿಸ್ತಾನದ ಓರ್ವ ಅಧಿಕಾರಿ ಸಾವನ್ನಪ್ಪಿದ್ದರು. ಇನ್ನು ಮಧ್ಯೆ ನದಿ ನೀರು ಹಂಚಿಕೆ ವಿಚಾರವಾಗಿ ಈ ಗಲಾಟೆ ಆಗಿತ್ತು ಅಂತ ಕೂಡ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply