ಸರ್ಕಾರದಲ್ಲಿ ಹೈಬತುಲ್ಲಾ ಅಖುಂಡ್​ಝಾದಾ ಸುಪ್ರೀಂ ಲೀಡರ್​​: ತಾಲಿಬಾನ್​​

masthmagaa.com:

ತಾಲಿಬಾನ್ ತನ್ನ ಸರ್ವೋಚ್ಛ ನಾಯಕ ಹೈಬತುಲ್ಲಾ ಅಖುಂಡ್​ಝಾದಾ ನೇತೃತ್ವದಲ್ಲಿ ಸರ್ಕಾರ ರಚನೆಗೆ ಸಿದ್ಧತೆ ನಡೆಸ್ತಿದೆ ಅಂತ ತಾಲಿಬಾನಿಗಳ ಕಲ್ಚರಲ್ ಕಮಿಷನ್​​ನ ಸದಸ್ಯ ಬಿಲಾಲ್​ ಕರಿಮಿ ಹೇಳಿದ್ದಾರೆ. ಇದ್ರಲ್ಲಿ ತಾಲಿಬಾನ್ ಮುಖ್ಯಸ್ಥ ಹೈಬತೊಲ್ಲಾ ಅಖುಂಡ್​​ಝಾದಾ ಸುಪ್ರೀಂ ಲೀಡರ್ ರೀತಿ ಇರ್ತಾರೆ. ಉಳಿದಂತೆ ಅವರಿಗೆ ಮೂವರು ಡೆಪ್ಯುಟಿಗಳಿರ್ತಾರೆ. ಅವರಲ್ಲಿ ಒಬ್ಬರಾದ ಅಬ್ದುಲ್ ಘನಿ ಬರಾದರ್​ ಸರ್ಕಾರದ ಸಾರ್ವಜನಿಕ ಮುಖವಾಗಿ ಇರ್ತಾರೆ. ಸರ್ಕಾರದ ದೈನಂದಿನ ವ್ಯವಹಾರಗಳನ್ನುಇವರೇ ನೋಡಿಕೊಳ್ತಾರೆ ಅಂತ ಹೇಳಿದ್ದಾರೆ. ಮುಕ್ತವಾದ ಸರ್ಕಾರ ರಚನೆ ಸಂಬಂಧ ಇಸ್ಲಾಮಿಕ್ ಎಮಿರೇಟ್​​ ಲೀಡರ್ಸ್​​, ಹಿಂದಿನ ಸರ್ಕಾರದ ನಾಯಕರು ಮತ್ತು ಇತರೆ ಪ್ರಭಾವಿಗಳ ಜೊತೆಗಿನ ಮಾತುಕತೆ ಅಂತ್ಯವಾಗಿದೆ. ಎಲ್ಲರೂ ಒಮ್ಮತಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ಸರ್ಕಾರ ರಚನೆ ಬಗ್ಗೆ ಘೋಷಣೆ ಮಾಡ್ತೀವಿ ಅಂತ ಹೇಳಿದ್ದಾರೆ. ಹೈಬತುಲ್ಲಾ ಅಖುಂಡ್ ಝಾದಾ ಮತ್ತು ಅಬ್ದುಲ್ ಘನಿ ಬರಾದರ್ ಸದ್ಯದಲ್ಲೇ ಕಾಬೂಲ್​​ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ತಾರೆ ಅಂತ ಕೂಡ ತಾಲಿಬಾನಿ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply