ಕಾಬೂಲ್​​ನಲ್ಲಿ ಗರ್ಭಿಣಿಯನ್ನು ಹತ್ಯೆಗೈದ ತಾಲಿಬಾನ್!

masthmagaa.com:

ತಾಲಿಬಾನಿಗಳು ತಮ್ಮ ಕ್ರೂರ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ. ಘೋರ್ ಪ್ರಾಂತ್ಯದಲ್ಲಿ ಗರ್ಭಿಣಿ ಪೊಲೀಸ್ ಅಧಿಕಾರಿಯನ್ನು ಅವರ ಕುಟುಂಬಸ್ಥರ ಮುಂದೆಯೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. 6 ತಿಂಗಳ ಗರ್ಭಿಣಿಯಾಗಿದ್ದ ಪೊಲೀಸ್ ಅಧಿಕಾರಿ ನಿಗರ ಅವರನ್ನು ಅವರ ಪತಿ ಮತ್ತು ಮಕ್ಕಳ ಮುಂದೆಯೇ ಗುಂಡಿಟ್ಟು ಹತ್ಯೆ ಮಾಡಲಾಗಿದೆ ಅಂತ ಗೊತ್ತಾಗಿದೆ. ಇತ್ತೀಚೆಗಷ್ಟೇ ಒಂದಷ್ಟು ಮಹಿಳೆಯರು ಕಾಬೂಲ್​ನಲ್ಲಿ ತಮಗೂ ಸರ್ಕಾರದಲ್ಲಿ ಅವಕಾಶ ಕೊಡಬೇಕು ಅಂತ ಪ್ರತಿಭಟನೆ ನಡೆಸಿದ್ರು. ಇದ್ರ ಬೆನ್ನಲ್ಲೇ ಈ ಕೃತ್ಯ ಎಸಗಿದ್ದಾರೆ ತಾಲಿಬಾನಿಗಳು.

-masthmagaa.com

Contact Us for Advertisement

Leave a Reply