600 ತಾಲಿಬಾನಿಗಳ ಹತ್ಯೆ: ಪಂಜ್​ಶಿರ್ ವಶಕ್ಕೆ ಪಡೆಯುತ್ತಾ ತಾಲಿಬಾನ್?

masthmagaa.com:

ಇತ್ತೀಚೆಗಷ್ಟೇ ಪಂಜ್​ಶಿರ್​ ಕೂಡ ತಾಲಿಬಾನಿಗಳ ವಶವಾಗಿದೆ. ಪಂಜ್​ಶಿರ್ ಗ್ಯಾಂಗ್ ಪಲಾಯನ ಮಾಡಿದೆ ಅಂತ ಸುದ್ದಿಯಾಗಿತ್ತು. ಆದ್ರೆ ಅದೆಲ್ಲ ಸುಳ್ಳು ಅಂತ ಈಗ ಗೊತ್ತಾಗಿದೆ. ಯಾಕಂದ್ರೆ ಈ ಬಗ್ಗೆ ತಾಲಿಬಾನಿಗಳು ಇನ್ನೂ ಕೂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಅದೇ ರೀತಿ ಪಂಜ್​ಶಿರ್​​ನಲ್ಲಿ ತಾಲಿಬಾನಿಗಳು ಮತ್ತು ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸ್​ ನಡುವಿನ ಕಾದಾಟ ಮುಂದುವರಿದಿದೆ. ಮತ್ತೂ 600 ತಾಲಿಬಾನಿಗಳನ್ನು ಹೊಡೆದುರುಳಿಸಿದ್ದು, ಸಾವಿರಕ್ಕೂ ಹೆಚ್ಚು ತಾಲಿಬಾನಿಗಳನ್ನು ಬಂಧಿಸಿಟ್ಟಿದ್ದೀವಿ. ಇವರಲ್ಲಿ ಕೆಲವರು ಸೋತು ಶರಣಾಗಿದ್ದಾರೆ ಅಂತ ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸ್​​ನ ವಕ್ತಾರ ಫಹೀಂ ದಷ್ಠಿ ಹೇಳಿದ್ದಾರೆ. ಪಂಜ್​ಶಿರ್ ಪ್ರಾಂತ್ಯದಲ್ಲಿ ಅಲ್ಲಲ್ಲಿ ನೆಲಬಾಂಬ್​​ಗಳನ್ನು ಇಡಲಾಗಿದ್ದು, ತಾಲಿಬಾನಿಗಳು ಮುನ್ನುಗ್ಗಲು ಭಾರಿ ತೊಂದ್ರೆಯಾಗ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ತಾಲಿಬಾನಿಗಳು ನೆಲಬಾಂಬ್​​ಗಳಿಂದಾಗಿ ನಾವು ಪಂಜ್​ಶಿರ್ ಪ್ರಾಂತೀಯ ರಾಜಧಾನಿ ಬಜಾರಾಕ್ ಮತ್ತು ಪ್ರಾಂತೀಯ ಗವರ್ನರ್ ಕಾಂಪೌಂಡ್​​ಗೆ ಹೋಗೋಕೆ ಆಗ್ತಿಲ್ಲ. ಆದ್ರೂ ನಮ್ಮ ಹೋರಾಟ ಮುಂದುವರಿಸಿದ್ದೀವಿ ಅಂತ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply