ಮಹಿಳೆಯರ ದಿನ ತಾಲಿಬಾನ್‌ ವಿರುದ್ಧ ನಿಂತ ಅಫ್ಘಾನ್‌ ಮಹಿಳೆಯರು!

masthmagaa.com:

ಆಶ್ಚರ್ಯ ಅನ್ನೋ ಹಾಗೇ ತಾಲಿಬಾನ್‌ ಆಡಳಿತದ ವಿರುದ್ದ ಅಫ್ಘಾನಿ ಮಹಿಳೆಯರು ಕಿಡಿಕಾರಿದ್ದು ಪ್ರತಿಭಟನೆ ನಡೆಸಿದ್ದಾರೆ. ಮಾರ್ಚ್‌ 08 ರಂದು ಅಂದ್ರೆ ವಿಶ್ವ ಮಹಿಳೆಯರ ದಿನದ ಅಂಗವಾಗಿ ಅಫ್ಘಾನ್‌ ಮಹಿಳೆಯರ ಪುಟ್ಟ ಗುಂಪೊಂದು ಅಲ್ಲಿ ಹೋರಾಟ ಮಾಡಿ ತಮ್ಮ ಹಕ್ಕುಗಳಿಗೆ ಡಿಮಾಂಡ್‌ ಇಟ್ಟಿದ್ದಾರೆ. ತಮ್ಮ ಮೇಲೆ ಹೇರಿರೋ ನಿರ್ಬಂಧಗಳನ್ನ ತೆಗೆದುಹಾಕಿ…ಸ್ವಾತಂತ್ರ್ಯ ನೀಡಿ ಅಂತ ಕೇಳ್ಕೊಂಡಿದ್ದಾರೆ. ಈ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು ತಾಲಿಬಾನ್‌ ಆಡಳಿತ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ಕೊಟ್ಟಿದೆ ಅಂತ ಹೇಳಿಲ್ಲ. 2021ರಲ್ಲಿ ಅಫ್ಘಾನ್‌ನಲ್ಲಿ ತಾಲಿಬಾನ್‌ ಅಧಿಕಾರಕ್ಕೆ ಬಂದಾಗಿನಿಂದ..ಅಲ್ಲಿನ ಮಹಿಳೆಯರ ಮೇಲೆ ಸಾಕಷ್ಟು ನಿರ್ಬಂಧಗಳನ್ನ ಹೇರಲಾಗಿದೆ. ಅವ್ರ ವಿದ್ಯಾಭ್ಯಾಸಕ್ಕೂ ಕತ್ತರಿ ಹಾಕಲಾಗಿದೆ. ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆಗಳು ಇದರ ಬಗ್ಗೆ ದನಿ ಎತ್ತಿದ್ರೂ ಅದರ ಬಗ್ಗೆ ಹೆಚ್ಚಿನ ಪ್ರಯೋಜನೆ ಆಗಿಲ್ಲ. ಅಲ್ಲಿನ ಮಹಿಳೆಯರು ಅಪರೂಪಕ್ಕೆ ಈ ರೀತಿ ಪ್ರತಿಭಟನೆ ಮಾಡಿದ್ರೂ ಅವರನ್ನ ಸಾರ್ವಜನಿಕವಾಗಿ ದಂಡನೆಗೆ ಈಡುಮಾಡಲಾಗಿದೆ. ಆದ್ರೆ ಈಗ ಪ್ರತಿಭಟನೆ ಮಾಡಿರೋ ಮಹಿಳೆಯರ ಕಥೆ ಏನು ಅನ್ನೋ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್‌ ಆಗಿಲ್ಲ.

-masthmagaa.com

Contact Us for Advertisement

Leave a Reply