ನವೆಂಬರ್ 19ರಂದು 580 ವರ್ಷಗಳಲ್ಲೇ ದೊಡ್ಡ ಚಂದ್ರಗ್ರಹಣ!

masthmaa.com:

ನವೆಂಬರ್ 19ರಂದು 580 ವರ್ಷಗಳಲ್ಲೇ ಅತಿದೊಡ್ಡ ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ. ಈಶಾನ್ಯ ಭಾರತದ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂನಲ್ಲಿ ಈ ಚಂದ್ರಗ್ರಹಣ ಗೋಚರಿಸಲಿದೆ. ಮಧ್ಯಾಹ್ನ 12.48ರಿಂದ ಸಂಜೆ 4.17ರವರೆಗೆ ಗ್ರಹಣ ಇರಲಿದೆ. ಸುಮಾರು 3 ಗಂಟೆ 28 ನಿಮಿಷ 24 ಸೆಕೆಂಡ್​​ಗಳ ಕಾಲ ಈ ಗ್ರಹಣ ಇರೋದ್ರಿಂದ 580 ವರ್ಷಗಳಲ್ಲೇ ದೀರ್ಘಾವಧಿಯ ಭಾಗಶಃ ಚಂದ್ರಗ್ರಹಣ ಇದಾಗಿದೆ ಅಂತ ತಜ್ಞರು ತಿಳಿಸಿದ್ದಾರೆ. ಈ ಹಿಂದೆ 1440ನೇ ಇಸವಿಯ ಫೆಬ್ರವರಿ 18ರಂದು ದೀರ್ಘಾವಧಿಯ ಚಂದ್ರಗ್ರಹಣ ಸಂಭವಿಸಿತ್ತು. ಇನ್ನು 2669ರ ಫೆಬ್ರವರಿ 8ರಂದು ಇಷ್ಟು ದೀರ್ಘವಾದ ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರ ಮತ್ತು ಸೂರ್ಯನ ನಡುವೆ ಕರೆಕ್ಟಾಗಿ ಭೂಮಿ ಅಡ್ಡಬಂದು ಭೂಮಿಯ ನೆರಳು ಚಂದ್ರನ ಮೇಲೆ ಬೀಳೋದನ್ನ ಚಂದ್ರಗ್ರಹಣ ಅಂತ ಹೇಳಲಾಗುತ್ತೆ. ಇಲ್ಲಿ ನೆರಳು ಕಂಪ್ಲೀಟಾಗಿ ಚಂದ್ರನ ಮೇಲೆ ಬೀಳೋದಿಲ್ಲ. ಹೀಗಾಗಿ ಇದನ್ನು ಭಾಗಶಃ ಚಂದ್ರಗ್ರಹಣ ಅಂತ ಕರೆಯಲಾಗುತ್ತೆ.

-masthmagaa.com

Contact Us for Advertisement

Leave a Reply