ಗೆಹ್ಲೋಟ್-ಪೈಲೆಟ್‌ ಭಿನ್ನಾಭಿಪ್ರಾಯ: ಉಭಯ ನಾಯಕರು ಪಕ್ಷಕ್ಕೆ ಅನಿವಾರ್ಯ ಎಂದ ಕಾಂಗ್ರೆಸ್

masthmagaa.com:

ರಾಜಸ್ಥಾನದ ಸಿಎಂ ಅಶೋಕ್‌ ಗೆಹ್ಲೋಟ್‌, ಅಲ್ಲಿನ ಮಾಜಿ ಡಿಸಿಎಂ ಸಚಿನ್‌ ಪೈಲೆಟ್‌ ವಿರುದ್ದ ಗಂಭೀರ ಆರೋಪಗಳನ್ನ ಮಾಡಿದ್ರು. ಇದಕ್ಕೆ ಪ್ರತಿಕ್ರಯಿಸಿರೊ ಕಾಂಗ್ರೆಸ್‌, ಸಿಎಂ ಅವರ ಮಾತುಗಳು ಅನಿರೀಕ್ಷಿತ ಹಾಗೂ ಸರ್ಪ್ರೈಸಿಂಗ್‌ ಆಗಿದ್ವು. ಈ ಭಿನ್ನಾಭಿಪ್ರಾಯವನ್ನ ಹೇಗೆ ಸಾಲ್ವ್‌ ಮಾಡಬೇಕು ಅಂತ ಚರ್ಚೆ ಮಾಡಲಾಗುತ್ತೆ. ನಾವೆಲ್ಲ ಒಂದೇ ಕುಟುಂಬ, ಅನುಭವಿ ನಾಯಕರಾದ ಗೆಹ್ಲೋಟ್‌ ಹಾಗೂ ಯುವ ನಾಯಕರಾದ ಪೈಲೆಟ್‌ರಂತ ಇಬ್ಬರು ನಾಯಕರು ಕಾಂಗ್ರೆಸ್‌ಗೆ ಬೇಕು ಅಂತ ಪಕ್ಷದ ನಾಯಕ ಜೈರಾಮ್‌ ರಮೇಶ್ ಹೇಳಿದ್ದಾರೆ. ಇತ್ತ ಪೈಲಟ್‌ಗೆ 10 ಶಾಸಕರ ಬೆಂಬಲವೂ ಇಲ್ಲ ಅಂತ ಗೆಹ್ಲೋಟ್ ಹೇಳಿದ್ರು. ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿರೊ ಸಚಿವ ರಾಜೇಂದ್ರ ಸಿಂಗ್‌ ಗುಧ, 10% ಅಲ್ಲ 80%ನಷ್ಟು ಶಾಸಕರು ಸಚಿನ್‌ ಪೈಲೆಟ್‌ ಜೊತೆಗಿದ್ದಾರೆ. ಅವರಿಗಿಂತ ಉತ್ತಮ ರಾಜಕಾರಣಿ ಇಲ್ಲವೇ ಇಲ್ಲ ಗೆಹ್ಲೋಟ್‌ಗೆ ತಿರುಗೇಟು ನೀಡಿದ್ದಾರೆ. ‌

-masthmagaa.com

Contact Us for Advertisement

Leave a Reply