ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಜನಪ್ರಿಯತೆ ಎಂದಿಗಿಂತ ಕಡಿಮೆ!

masthmagaa.com:

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವ್ರ ಜನಪ್ರಿಯತೆ ತುಂಬಾ ಕಡಿಮೆಯಾಗಿದೆ ಅಂತ YouGov ಸರ್ವೇ ತಿಳಿಸಿದೆ. ಈ ಸರ್ವೇಗೆ ಪ್ರತಿಕ್ರಿಯೆ ನೀಡಿರೋ ಸುಮಾರು 70% ಜನರು, ರಿಷಿ ಸುನಕ್‌ ಬಗ್ಗೆ ಅಷ್ಟೇನೂ ಒಳ್ಳೆ ಅಭಿಪ್ರಾಯವನ್ನ ಇಟ್ಕೊಂಡಿಲ್ಲ. ಇನ್ನು ಕೇವಲ 21% ಜನರಿಗೆ ಮಾತ್ರ ಸುನಕ್‌ ಮೇಲೆ ಒಳ್ಳೆ ಅಭಿಪ್ರಾಯವಿದೆ ಅಂತ ಹೇಳಲಾಗಿದೆ. ಕಳೆದ ತಿಂಗಳಷ್ಟೇ ಈ ಕುರಿತು ಸರ್ವೇ ನಡೆಸಲಾಗಿತ್ತು. ಅದಕ್ಕೆ ಕಂಪೇರ್‌ ಮಾಡಿದ್ರೆ ಈ ಬಾರಿ ಅಂದ್ರೆ ಡಿಸೆಂಬರ್‌ 11 ಮತ್ತು 12 ರಂದು ನಡೆಸಿದ ಸರ್ವೇನಲ್ಲಿ ಸುನಕ್‌ ಅವ್ರ ಜನಪ್ರಿಯತೆ ರೇಟಿಂಗ್‌ನಲ್ಲಿ 10% ಇಳಿಕೆ ಕಂಡಿದೆ.

-masthmagaa.com

Contact Us for Advertisement

Leave a Reply