ಕೃಷಿ ಕಾನೂನು ವಾಪಸ್! ಸೋಷಿಯಲ್ ಮೀಡಿಯಾದಲ್ಲಿ ನೋಟಾ ಟ್ರೆಂಡ್​​!

masthmagaa.com:

ಇನ್ನು ನರೇಂದ್ರ ಮೋದಿ 2014ರಲ್ಲಿ ದೇಶದ ಪ್ರಧಾನಿಯಾದ ಬಳಿಕ ಜಾರಿಗೆ ತಂದು ವಾಪಸ್ ತೆಗೆದುಕೊಂಡ ದೊಡ್ಡ ನೀತಿ ಇದಾಗಿದೆ. ಈ ಹಿಂದೆಯೂ ಭೂಸುಧಾರಣೆ ಕಾಯ್ದೆ ಸೇರಿದಂತೆ ಹಲವು ಕಾನೂನುಗಳನ್ನು ವಾಪಸ್ ತಗೊಂಡಿದ್ರೂ ಕೂಡ ಅದ್ಯಾವುದೂ ಇಷ್ಟು ದೊಡ್ಡ ಮಟ್ಟದ ಪ್ರತಿಭಟನೆಯನ್ನು ನೋಡಿರಲಿಲ್ಲ. ಸಿಟಿಜನ್ ಅಮೆಂಡ್​​ಮೆಂಟ್ ಆಕ್ಟ್​​​ ವಿರುದ್ಧ ಇಡೀ ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆದ್ರೂ ಅದನ್ನು ವಾಪಸ್ ಪಡೆಯಲೇ ಇಲ್ಲ.

ಇವೆಲ್ಲದ್ರ ನಡುವೆ ಇವತ್ತು ಸೋಷಿಯಲ್ ಮೀಡಿಯಾದಲ್ಲಿ ನೋಟಾ ಫುಲ್ ಟ್ರೆಂಡ್ ಆಗಿದೆ. ಕೆಲವರು ‘ನಾವು ಕಳೆದ ಬಾರಿ ಮೋದಿಯವರಿಗೆ ಮತ ಹಾಕಿದ್ವಿ. ಆದ್ರೆ ಈ ನಿರ್ಧಾರದಿಂದ ಬೇಸರವಾಗಿದೆ. ಹಾಗಂತ ನಾವು ಯಾವುದೇ ಕಾರಣಕ್ಕೂ ಬೇರೆ ಪಕ್ಷಗಳಿಗೆ ಮತ ಹಾಕೋದಿಲ್ಲ. ಬದಲಿಗೆ ನೋಟಾ ಹಾಕ್ತೀವಿ’ ಅಂತ ಟ್ರೆಂಡ್ ಮಾಡಿದ್ದಾರೆ. ಇದೇ ವೇಳೆ ಇನ್ನು ಕೆಲವರು ನೋಟಾ ಹಾಕೋದು ಒಂದೆ, ರಾಹುಲ್ ಗಾಂಧಿಗೆ ಮತ ಹಾಕೋದು ಒಂದೇ ಅಂತ ಉತ್ತರ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply