ಪಾಕಿಸ್ತಾನವನ್ನು ಬೆಚ್ಚಿ ಬೀಳಿಸಿದ ಮತ್ತೊಂದು ವಿಡಿಯೋ! ಅದ್ರಲ್ಲಿ ಏನಿದೆ ಗೊತ್ತಾ?

masthmagaa.com:

ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಮಹಿಳೆ ಮೇಲೆ ದೌರ್ಜನ್ಯ ಎಸಗಿರೋ ವಿಡಿಯೋ ಬೆಳಕಿಗೆ ಬಂದಿತ್ತು. ಇದ್ರಲ್ಲಿ 300ರಿಂದ 400 ಜನ ಮಹಿಳೆ ಮೇಲೆ ಮುಗಿಬಿದ್ದು ದೌರ್ಜನ್ಯ ಎಸಗಿರೋದಾಗಿ ಮಹಿಳಾ ಟಿಕ್​ಟಾಕರ್​​ ಆರೋಪಿಸಿದ್ರು. ಇದೀಗ ಮತ್ತೊಂದು ಭಯಾನಕ ವಿಡಿಯೋ ಇಡೀ ಪಾಕಿಸ್ತಾನವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಇದ್ರಲ್ಲಿ ಫುಲ್ ಜನ ತುಂಬಿರೋ ರಸ್ತೆಯಲ್ಲಿ ಆಟೋವೊಂದು ಹೋಗ್ತಿದ್ದು, ಅದ್ರಲ್ಲಿ ಇಬ್ಬರು ಮಹಿಳೆಯರು ಮಧ್ಯದಲ್ಲಿ ಮಗುವನ್ನು ಕೂರಿಸಿಕೊಂಡು ಕೂತಿದ್ದಾರೆ. ಈ ವೇಳೆ ಬೈಕ್​ನಲ್ಲಿ ಬಂದು ಸುತ್ತುವರಿಯೋ ಬೈಕ್​ ಸವಾರರು ಕಿರುಕುಳ ನೀಡಿದ್ದಾರೆ. ನಂತರ ಅವರಲ್ಲಿ ಒಬ್ಬ ದುಷ್ಕರ್ಮಿ ಇಳಿದು, ಹೋಗುತ್ತಿದ್ದ ಅಟೋದ ಫೂಟ್​​ಸ್ಟೆಪ್​ನಲ್ಲಿ ನಿಂತು ಒಳಗಿದ್ದ ಮಹಿಳೆಯ ಕೆನ್ನೆಗೆ ಮುತ್ತುಕೊಟ್ಟಿದ್ದಾನೆ. ಈ ವೇಳೆ ಮತ್ತೋರ್ವ ಮಹಿಳೆ ಕೈಗೆ ಸ್ಲಿಪ್ಪರ್ ತೆಗೆದುಕೊಂಡು ಹೊಡೆಯೋದಾಗಿ ಎಚ್ಚರಿಸೋದು ಕೂಡ ನೋಡ್ಬೋದು. ಈ ವೇಳೆ ಮಹಿಳೆ ಸೀದಾ ಹೊರಗೆ ಹೋಗೋಕೆ ಯತ್ನಿಸಿದ್ದು, ಜೊತೆಗಿದ್ದ ಮತ್ತೋರ್ವ ಮಹಿಳೆ ತಡೆದಿದ್ದಾರೆ. ಇಡೀ ದೇಶದಲ್ಲೀಗ ಭಾರಿ ವಿರೋಧ ವ್ಯಕ್ತವಾಗ್ತಿದ್ದು, ಮಹಿಳೆಯರ ರಕ್ಷಣೆ ಬಗ್ಗೆ ಪ್ರಶ್ನೆ ಮೂಡ್ತಿದೆ.

-masthmagaa.com

Contact Us for Advertisement

Leave a Reply