ʻಸನಾತನ = ಕುಷ್ಠರೋಗ, ಏಡ್ಸ್‌ʼ! DMK ನಾಯಕರ ನಿಲ್ಲದ ʻಧರ್ಮʼದಾಳಿ!

masthmagaa.com:

ಸನಾತನ ಧರ್ಮದ ಕುರಿತು ತಮಿಳುನಾಡಿನ ಡಿಎಂಕೆ ನಾಯಕರ ವಿವಾದತ್ಮಾಕ ಮಾತುಗಳ ಸರಣಿ ಮುಂದುವರೆದಿದೆ. ಇದೀಗ ಸನಾತನ ಧರ್ಮವನ್ನ HIV ಹಾಗೂ ಕುಷ್ಠರೋಗಗಳಿಗೆ ಹೋಲಿಕೆ ಮಾಡಿ ಡಿಎಂಕೆ ಸಂಸದ ಎ ರಾಜಾ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ʻಸನಾತನ ಧರ್ಮ ಮಲೇರಿಯಾ ಹಾಗೂ ಡೆಂಗ್ಯೂ ರೀತಿ ಅದನ್ನ ನಿರ್ಮೂಲನೆ ಮಾಡಬೇಕು ಅಂತ ಉದಯನಿಧಿ ನೀಡಿರೊ ಹೇಳಿಕೆ ಅತ್ಯಂತ ಸೂಕ್ಷ್ಮ ವಿಚಾರ. ನಾವು ಇದನ್ನ ಸಮಾಜವನ್ನ ಕಾಡ್ತಿರೊ HIV ಹಾಗೂ ಕುಷ್ಠರೋಗಗಳ ರೀತಿ ನೋಡಬೇಕಾಗಿದೆ ಅಂತ ಹೇಳಿದ್ದಾರೆ. ಇದರ ಬೆನ್ನಲ್ಲೇ ಸಂಸದರ ವಿರುದ್ದ ತೀವ್ರ ಆಕ್ರೋಶ ಭುಗಿಲೆದ್ದಿದೆ. ದೇಶದ ಹಲವು ಭಾಗಗಳಲ್ಲಿ ದೂರು ಕೂಡ ದಾಖಲಾಗಿದೆ. ಇನ್ನೊಂದ್‌ ಕಡೆ ಉದಯನಿಧಿ ಸ್ಟಾಲಿನ್‌ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರೊ ಎಲ್ಲ FIRಗಳನ್ನ ಕಾನೂನಿನ ಪ್ರಕಾರ ಎದುರಿಸೋದಾಗಿ ಹೇಳಿದ್ದಾರೆ. ಈ ಕುರಿತು Xನಲ್ಲಿ ಪೋಸ್ಟ್‌ ಹಾಕಿರೊ ಉದಯನಿಧಿ, ಕಳೆದ 9 ವರ್ಷಗಳಿಂದ ಮೋದಿ ಯಾವ ಕೆಲಸ ಮಾಡ್ತಿಲ್ಲ. ಆವಾಗಾವಾಗ ನೋಟು ಅಮಾನ್ಯೀಕರಣ, ಗುಡಿಸಲುಗಳನ್ನ ಹೈಡ್‌ ಮಾಡೋಕೆ ಗೋಡೆಗಳನ್ನ ನಿರ್ಮಿಸೋದು, ಹೊಸ ಸಂಸತ್‌ ಭವನ ನಿರ್ಮಿಸೋದು ಹಾಗೂ ಅದ್ರಲ್ಲಿ ಸೆಂಗೋಲ್‌ ಸ್ಥಾಪನೆ ಮಾಡೋದನ್ನ ಮಾಡ್ತಾರೆ ಅಂತ ಹೇಳಿದ್ದಾರೆ. ಇತ್ತ ಸಂವಿಧಾನವೇ ನನ್ನ ಧರ್ಮ, ಬಿಜೆಪಿಯವರು ನನ್ನ ಮೇಲೆ FIR ದಾಖಲಿಸಿ, ಬಂಧಿಸಲು ಬಯಸಿದರೆ ಅದಕ್ಕೆಲ್ಲಾ ಹೆದರಲ್ಲ ಅಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅಂದ್ಹಾಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಉದಯನಿಧಿ ಹಾಗೂ ಪ್ರಿಯಾಂಕ್‌ ಖರ್ಗೆ ಮೇಲೆ FIR ದಾಖಲಾಗಿದೆ. ಇನ್ನೊಂದ್‌ ಕಡೆ ಸನಾತನ ಧರ್ಮದ ಕುರಿತು ಹೇಳಿಕೆ ನೀಡಿರೊ ತಮ್ಮ ಪುತ್ರನ ಬೆನ್ನಿಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌ ನಿಂತಿದ್ದಾರೆ. ಬಿಜೆಪಿ ಪರ ಶಕ್ತಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಜನರ ನರಮೇಧಕ್ಕೆ ಉದಯನಿಧಿ ಕರೆ ನೀಡಿದ್ದಾರೆ ಅಂತ ಆರೋಪಿಸಿ ಅಪಪ್ರಚಾರ ನಡೆಸಿವೆ. ಟೀಕಾಕಾರರ ಜೊತೆ ಪ್ರಧಾನಿ ಕೂಡ ಸೇರಿದ್ದಾರೆ. ಮೋದಿ ಟೀಕಾಕಾರರೊಂದಿಗೆ ಏಕೆ ಸೇರುತ್ತಿದ್ದಾರೆ.. ಅವರ ಉದ್ದೇಶವೇನು ಅಂತ ಪ್ರಶ್ನಿಸಿದ್ದಾರೆ. ಇನ್ನೊಂದ್‌ ಕಡೆ ಸನಾತನ ಧರ್ಮವನ್ನ ಅವಹೇಳನ ಮಾಡಿರೋ ಉದಯನಿಧಿ ಕೆನ್ನೆಗೆ ಬಾರಿಸಿದ್ರೆ 10 ಲಕ್ಷ ರೂಪಾಯಿ ನಗದು ಕೊಡೊದಾಗಿ ಆಂಧ್ರ ಪ್ರದೇಶದ ಹಿಂದೂ ಸಂಘಟನೆಯೊಂದು ಘೋಷಿಸಿದೆ. ಇನ್ನು ಸನಾತನ ಧರ್ಮದ ವಿವಾದದ ಕುರಿತು ಕಾಂಗ್ರೆಸ್ ಮೌನ ಮುರಿದಿದೆ. ಒಂದು ರೀತಿ ಅಂತರ ಕಾದುಕೊಳ್ಳೋ ಕೆಲಸ ಮಾಡಿದೆ. ನಾವು ಎಲ್ಲ ಧರ್ಮಗಳನ್ನ ಗೌರವಿಸ್ತೇವೆ. ಅಂಥ ಹೇಳಿಕೆಗಳನ್ನ ನಂಬಲ್ಲ ಅಂತ ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply