ಶ್ರೀಕೃಷ್ಣ ಜನ್ಮಭೂಮಿ ಬೇಡಿಕೆಯಿಟ್ಟ ದೇವೇಂದ್ರ ಫಡ್ನವಿಸ್‌!

masthmagaa.com:

ಶ್ರೀರಾಮಮಂದಿರ ನಂತ್ರ ಮಥುರಾ ಶ್ರೀಕೃಷ್ಣ ಜನ್ಮಭೂಮಿ ವಿಚಾರ ಮುನ್ನೆಲೆಗೆ ಬರ್ತಿರೋ ಟೈಮಲ್ಲೇ, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್‌ ಈ ವಿಚಾರವಾಗಿ ಸ್ವರ ಎತ್ತಿದ್ದಾರೆ. ರಾಮಮಂದಿರದಂತೆ ಶ್ರೀಕೃಷ್ಣನ ಜನ್ಮಸ್ಥಳ ಮಥುರಾದಲ್ಲೂ ದೇವಾಲಯ ನಿರ್ಮಾಣ ಆಗ್ಬೇಕು ಅನ್ನೋ ಬೇಡಿಕೆ ಇಟ್ಟಿದ್ದಾರೆ. ʻಮಥುರಾ ಆಗ್ಲಿ.. ಕಾಶಿ ಆಗ್ಲಿ.. ಅಯೋಧ್ಯೆನೇ ಆಗ್ಲಿ. ಈ ಮೂರು ಜಾಗಗಳು ನಮ್ಮೆಲ್ಲರಿಗೂ ಬಹಳ ಪವಿತ್ರವಾದದ್ದು. ಸೋ, ಶ್ರೀಕೃಷ್ಣನ ಜನ್ಮಸ್ಥಳವೂ ಅಭಿವೃದ್ಧಿ ಆಗ್ಬೇಕು ಅಂತ ಜನರು ಬಯಸ್ತಾರೆ. ಪ್ರಧಾನಿ ಮೋದಿಯವ್ರ ನಾಯಕತ್ವದಲ್ಲಿ ಹೇಗೆ ರಾಮಮಂದಿರ ನ್ಯಾಯಯುತವಾಗಿ ನಿಮಾರ್ಣವಾಗಿದ್ಯೋ, ಅದೇ ರೀತಿ ಮಥುರಾದಲ್ಲಿ ಶ್ರೀಕೃಷ್ಣನ ದೇವಾಲಯವಾಗ್ಬೇಕುʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply