masthmagaa.com:

ಭಾರತ-ಚೀನಾ ನಡುವೆ ಸಂಘರ್ಷ ಏರ್ಪಟ್ಟಿರೋ ಪೂರ್ವ ಲಡಾಖ್​ನ ಪ್ಯಾಂಗಾಂಗ್ ಸೋ ಲೇಕ್​ನ ಉತ್ತರ ಮತ್ತು ದಕ್ಷಿಣ ಭಾಗದಿಂದ ಎರಡೂ ದೇಶದ ಸೇನೆಯನ್ನ ಹಂತ ಹಂತವಾಗಿ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ ಅಂತ ಚೀನಾದ ಗ್ಲೋಬಲ್ ಟೈಮ್ಸ್ ನಿನ್ನೆಯಷ್ಟೇ ಹೇಳಿತ್ತು. ಆದ್ರೆ ಭಾರತ ಈ ಬಗ್ಗೆ ಏನೂ ಹೇಳಿರಲಿಲ್ಲ. ಇವತ್ತು ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ಪೂರ್ವ ಲಡಾಖ್​ನಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ ಅನ್ನೋ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿದ್ರು. ‘ವಾಸ್ತವ ನಿಯಂತ್ರಣ ರೇಖೆ (LAC) ಬಳಿ ಶಾಂತಿಯುತ ವಾತಾವರಣ ಮುಂದುವರಿಸಲು ನಾವು ಬದ್ಧವಾಗಿದ್ದೇವೆ. LAC ಬಳಿ ಚೀನಾ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಸೇನೆಯನ್ನ ನಿಯೋಜಿಸಿದೆ. ನಮ್ಮ ಸೇನೆ ಕೂಡ ಅದಕ್ಕೆ ಪ್ರತಿಯಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಪ್ಯಾಂಗಾಂಗ್​ ಲೇಕ್​ನ ಉತ್ತರ ಮತ್ತು ದಕ್ಷಿಣ ಭಾಗದ ಸಂಘರ್ಷ ಬಗ್ಗೆ ಮಾತುಕತೆ ಆರಂಭವಾಗಿದೆ. ಆದ್ರೆ LAC ಬಳಿ ಸೇನಾ ಜಮಾವಣೆ ಬಗ್ಗೆ ಕೆಲವೊಂದು ವಿಚಾರಗಳು ಇನ್ನಷ್ಟೇ ಬಗೆಹರಿಯಬೇಕಿದೆ. ಶೀಘ್ರದಲ್ಲೇ ಸೇನೆಯನ್ನ ಸಂಪೂರ್ಣವಾಗಿ ಹಿಂದಕ್ಕೆ ಪಡೆಯಲು (Disengagement) ಉಭಯ ದೇಶಗಳು ಒಪ್ಪಿಕೊಂಡಿವೆ. ಚೀನಾ ತನ್ನ ಸೇನೆಯನ್ನ ಫಿಂಗರ್-8ರ ಪೂರ್ವ ಭಾಗಕ್ಕೆ ಕರೆಸಿಕೊಳ್ಳಲಿದೆ. ಭಾರತ ತನ್ನ ಸೇನೆಯನ್ನ ಫಿಂಗರ್​-3ರ ಬಳಿ ಇರುವ ಪರ್ಮನೆಂಟ್ ಬೇಸ್​ಗೆ ಕರೆಸಿಕೊಳ್ಳಲಿದೆ. ಜೊತೆಗೆ 2020ರ ಏಪ್ರಿಲ್​ನಿಂದ ಪ್ಯಾಂಗಾಂಗ್ ಲೇಕ್​ನ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಎರಡೂ ದೇಶದ ಸೇನೆಗಳು ನಿರ್ಮಿಸಿದ ಎಲ್ಲಾ ರಚನೆಗಳನ್ನ ತೆಗೆದು ಹಾಕಲಾಗುತ್ತೆ. ಈ ಪ್ರದೇಶ 2020ರ ಏಪ್ರಿಲ್​ಗೂ ಮೊದಲು ಹೇಗಿತ್ತೋ ಹಾಗೇ ಇರಲಿದೆ. ಚೀನಾ ಜೊತೆಗಿನ ನಿರಂತರ ಮಾತುಕತೆಯ ಪರಿಣಾಮವಾಗಿ ನಾವೀಗ ಪ್ಯಾಂಗಾಂಗ್​ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಸೇನೆ ವಾಪಸ್​ ಕರೆಸಿಕೊಳ್ಳುವ ಒಪ್ಪಂದಕ್ಕೆ ಬರಲು ಸಾಧ್ಯವಾಯ್ತು. ಮಾತುಕತೆ ವೇಳೆ ನಾವು 3 ಅಂಶಗಳ ಆಧಾರದ ಮೇಲೆ ಸಮಸ್ಯೆಗೆ ಪರಿಹಾರ ಬಯಸುತ್ತೇವೆ ಅಂತ ಚೀನಾಗೆ ತಿಳಿಸಿದ್ದೆವು. ಒಂದನೇದು, ಎರಡೂ ದೇಶಗಳು LACಯನ್ನ ಒಪ್ಪಿಕೊಂಡು ಅದನ್ನ ಗೌರವಿಸಬೇಕು. ಎರಡನೇದು, ಭಾರತವಾಗಲೀ ಅಥವಾ ಚೀನಾವಾಗಲೀ ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನ ಬದಲಾಯಿಸುವ ಪ್ರಯತ್ನ ಮಾಡಬಾರ್ದು. ಮೂರನೇದು, ಮಾಡಿಕೊಂಡಿರೋ ಎಲ್ಲಾ ರಾಜಿಗಳನ್ನು ಎರಡೂ ದೇಶಗಳು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು. ಇದಲ್ಲದೆ ಕಂಪ್ಲೀಟ್ ಡಿಸ್​​ಎಂಗೇಜ್ಮೆಂಟ್​ ಪೂರ್ಣಗೊಂಡ 48 ಗಂಟೆಗಲ್ಲಿ ಸೀನಿಯರ್ ಕಮಾಂಡರ್​ಗಳ ಮೀಟಿಂಗ್ ನಡೆಯಲಿದೆ’ ಅಂತ ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ಹೇಳಿದ್ರು.

-masthmagaa.com

Contact Us for Advertisement

Leave a Reply