ಏರ್‌ ಇಂಡಿಯಾದಲ್ಲಿ ವೀಲ್‌ಚೇರ್‌ ಕೊರತೆ! ಪ್ಯಾಸೆಂಜರ್‌ ಸಾವು!

masthmagaa.com:

ಮುಂಬೈ ಏರ್‌ಪೋರ್ಟ್‌ನಲ್ಲಿ ವೀಲ್‌ಚೇರ್‌ಗಳ ಕೊರತೆಯಿಂದ 80 ವರ್ಷದ ಏರ್‌ ಇಂಡಿಯಾ ವಿಮಾನದ ಪ್ಯಾಸೆಂಜರ್‌ ಒಬ್ರು ಮೃತಪಟ್ಟಿರೋ ಘಟನೆ ವರದಿಯಾಗಿದೆ. ಅಂದ್ಹಾಗೆ ಈ ಪ್ಯಾಸೆಂಜರ್‌ ಮತ್ತವ್ರ ಪತ್ನಿ ನ್ಯೂಯಾರ್ಕ್‌ನಿಂದ ಮುಂಬೈಗೆ ಬಂದಿದ್ರು. ಈ ವೇಳೆ ಅವ್ರು ಏರ್‌ಪೋರ್ಟ್‌ನಲ್ಲಿ ಇಬ್ರಿಗೋಸ್ಕರ 2 ವೀಲ್‌ಚೇರ್‌ನ್ನ ರಿಕ್ವೆಸ್ಟ್‌ ಮಾಡಿದ್ದಾರೆ. ಆದ್ರೆ ವೀಲ್‌ಚೇರ್‌ ಕೊರತೆಯಿಂದ ಕೇವಲ ಒಂದು ವೀಲ್‌ಚೇರ್‌ ಮಾತ್ರ ಹೊಂದಿಸೋಕೆ ಸಾಧ್ಯವಾಗಿದೆ. ಬೇರೆ ದಾರಿಯಿಲ್ದೇ, ಪತಿ ವೀಲ್‌ಚೇರ್‌ನ್ನ ತನ್ನ ಪತ್ನಿಗೆ ನೀಡಿ ವಿಮಾನವಿರೋ ಜಾಗದಿಂದ ಟರ್ಮಿನಲ್‌ಗೆ ಸುಮಾರು 1.5 ಕಿಮೀ ನಡ್ಕೊಂಡಿದ್ದಾರೆ. ಈ ವೇಳೆ ಸಡನ್‌ ಆಗಿ ಕುಸಿದು ಬಿದ್ದು ಅಲ್ಲೇ ಕೊನೆಯುಸಿರೆಳೆದಿದ್ದಾರೆ. ಇದೀಗ ಈ ಬಗ್ಗೆ ಏರ್‌ ಇಂಡಿಯಾ ಏರ್‌ಲೈನ್ಸ್‌ ರಿಯಾಕ್ಟ್‌ ಮಾಡಿದೆ. ʻಮತ್ತೊಂದು ವೀಲ್‌ಚೇರ್‌ನ್ನ ಅರೇಂಜ್‌ ಮಾಡ್ತಿವಿ…ಸ್ವಲ್ಪ ಹೊತ್ತು ವೈಟ್‌ ಮಾಡಿ ಅಂತ ಪ್ಯಾಸೆಂಜರ್‌ ಬಳಿ ಕೇಳ್ಕೊಂಡಿದ್ವಿ. ಆದ್ರೆ ಪ್ಯಾಸೆಂಜರ್‌ ಮಾತ್ರ ವೈಟ್‌ ಮಾಡದೇ ನಡೆದ್ಕೊಂಡೇ ಹೋದ್ರುʼ ಅಂತ ಸಮರ್ಥಿಸಿಕೊಂಡಿದೆ.

-masthmagaa.com

Contact Us for Advertisement

Leave a Reply