masthmagaa.com:

ವಿದೇಶದಿಂದ ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡಲು ಕಿರಾತಕರು ನಾನಾ ಸರ್ಕಸ್ ಮಾಡ್ತಾರೆ. ಇದೀಗ ವಿದೇಶದಿಂದ ವ್ಯಕ್ತಿಯೊಬ್ಬ ತನ್ನ ಒಳ ಉಡುಪು ಮತ್ತು ಗುದದ್ವಾರದಲ್ಲಿ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿ ಕೇರಳದ ಕೋಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಇಂತಹ ಒಟ್ಟು 3 ಪ್ರಕರಣಗಳಲ್ಲಿ ಬರೋಬ್ಬರಿ 1 ಕೆಜಿ 886 ಗ್ರಾಂನಷ್ಟು ಚಿನ್ನವನ್ನು ಏರ್​ಪೋರ್ಟ್​​ನ ಗುಪ್ತಚರ ದಳ ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ಎರಡು ಪ್ರಕರಣಗಲ್ಲಿ ವಿದೇಶದಿಂದ ಬಂದಿದ್ದ ಪ್ರಯಾಣಿಕರು ತಮ್ಮ ಅಂಡರ್​ವೇರ್ ಮತ್ತು ಗುದದ್ವಾರದಲ್ಲಿ ಚಿನ್ನವನ್ನು ಇಟ್ಟುಕೊಂಡಿದ್ದರು. ಅವರನ್ನು ಹಿಡಿದು ಅಲ್ಲಿಂದ ಚಿನ್ನವನ್ನು ತೆಗೆಸಿದ್ದಾರೆ. ಮೂರನೇ ಪ್ರಕರಣದಲ್ಲಿ ಏರ್​ಪೋರ್ಟ್​ನ ಬಾಥ್​ರೂಂ ಫ್ಲಶ್ ಟ್ಯಾಂಕ್​ ಒಳಗೆ ಚಿನ್ನವನ್ನು ಕದ್ದಿಟ್ಟಿದ್ದರು ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply