ಹಿಂದಿರುಗದ ʻಅಲೆಕ್ಸಿʼ ಮೃತದೇಹ! ಬೆಂಬಲಿಗರ ಆಕ್ರೋಶ!

masthmagaa.com:

ರಷ್ಯಾ ಸರ್ವಾಧಿಕಾರಿ ವ್ಲಾಡಿಮಿರ್‌ ಪುಟಿನ್‌ ಅವರ ಪ್ರಬಲ ಎದುರಾಳಿ ಅಲೆಕ್ಸಿ ನ್ಯಾವಲ್ನಿ ಸಾವು ಜಾಗತಿಕವಾಗಿ ದೊಡ್ಡ ಕೋಲಾಹಲ ಸೃಷ್ಟಿಸಿದ್ದು ಇಡೀ ಜಗತ್ತು ರಷ್ಯಾ ಆಡಳಿತದ ವಿರುದ್ದ ಕಿಡಿಕಾರ್ತಿದೆ. ಇದರ ನಡುವೆಯೇ ಈ ಅಲೆಕ್ಸಿ ನ್ಯಾವಲ್ನಿ ಸಾವಿಗೆ ಅವ್ರ ಬೆಂಬಲಿಗರು ಸಹ ತೀವ್ರ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ . ಈ ಸಾವಿಗೆ ರಷ್ಯಾ ಅಧಿಕಾರಿಗಳೇ ಕಾರಣ ಅಂತ ಆರೋಪ ಮಾಡ್ತಿದ್ದಾರೆ. ಜೊತೆಗೆ ಅವರ ಮೃತದೇಹವನ್ನ ಕೂಡ ನಮಗೆ ಕೊಡ್ತಾ ಇಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ. ʻರಷ್ಯಾ ಅಧಿಕಾರಿಗಳು ಅಲೆಕ್ಸಿ ಅವ್ರ ಮೃತದೇಹವನ್ನ ಅವ್ರ ಫ್ಯಾಮಿಲಿಗೆ ನೀಡೋಕೆ ನಿರಾಕರಿಸ್ತಿದ್ದಾರೆ. ತಮ್ಮ ತಪ್ಪನ್ನ ಮುಚ್ಹಾಕೋ ಕೆಲಸ ಮಾಡ್ತಿದ್ದಾರೆ. ರಷ್ಯಾ ಅಧಿಕಾರಿಗಳು ಕೊಲೆಗಡುಕರುʼ ಅಂತ ನಾವೆಲ್ನಿ ಬೆಂಬಲಿಗರು ಆರೋಪ ಮಾಡಿದ್ದಾರೆ.

ಇನ್ನೊಂದು ಕಡೆ ಅಲೆಕ್ಸಿ ಅವ್ರ ಮೃತದೇಹವನ್ನ ಫ್ಯಾಮಿಲಿಗೆ ಒಪ್ಪಿಸದ ರಷ್ಯಾ, ಸರ್ಕಾರ… ಈಗ ಅವರ ಸಾವಿನ ಕುರಿತಷ್ಟೇ ಮಾಹಿತಿ ಹಂಚಿಕೊಂಡಿದೆ. ಅಲೆಕ್ಸಿ ಅವ್ರ ಸಾವಿಗೆ ʻಸಡನ್‌ ಡೆತ್‌ ಸಿಂಡ್ರೋಮ್‌ʼ ಕಾರಣ ಅಂತ ಹೇಳಿದ್ದಾರೆ. ನಾವೆಲ್ನಿ ತಾಯಿಗೆ ರಷ್ಯಾ ಅಧಿಕಾರಿಗಳು ಫೆಬ್ರುವರಿ 17 ರಂದು ಈ ರೀತಿ ತಿಳಿಸಿದ್ದಾರೆ ಅಂತ ಸುದ್ದಿಯಾಗಿದೆ. ಅಂದ್ಹಾಗೆ ಈ ʻಸಡನ್‌ ಡೆತ್‌ ಸಿಂಡ್ರೋಮ್‌ʼ ಅನ್ನೋದು ಒಂದು ರೀತಿಯ ಕಾಯಿಲೆ ಏನಲ್ಲ. ಯಾವ್ದೇ ಕಾರಣವಿಲ್ಲದೇ ಸಡನ್‌ ಆಗಿ ಒಬ್ಬ ಮನುಷ್ಯ ಮೃತಪಟ್ರೆ…ಅದಕ್ಕೆ ಸಾಮಾನ್ಯವಾಗಿ ಈ ರೀತಿ ಕರೀತಾರೆ. ಅಂದ್ರೆ…ಹೃದಯಕ್ಕೆ ಸಂಬಂಧಪಟ್ಟ ಏನಾದ್ರೂ ಸಿಂಡ್ರೋಮ್‌ ಇದ್ದು….ಅದು ಇರೋದು ಗೊತ್ತೇ ಇಲ್ದೇ ಸಡನ್‌ ಆಗಿ ಮೃತಪಟ್ರೂ ಈ ತರಹ ಕರೆಯಲಾಗುತ್ತೆ. ಸೋ..ಇದೊಂದು ಜನರಲ್‌ ಟರ್ಮ್‌ ಅಷ್ಟೇ…. ಯಾವ್ದೇ ಒಂದು ನಿರ್ದಿಷ್ಟ ಆರೋಗ್ಯ ಸಮಸ್ಯೆ ಅಥ್ವಾ ಸಾವಿನ ಕಾರಣವನ್ನ ಸೂಚಿಸೋದಿಲ್ಲ. ಒಟ್ಟಾರೆಯಾಗಿ ಈ ಟರ್ಮ್‌ ಬಳಸಿದ್ರೆ…ಸಾವಿನ ಕಾರಣಕ್ಕೆ ಅಸ್ಪಷ್ಟತೆಯನ್ನ ತೋರಿಸುತ್ತೆ. ಹೀಗಾಗಿ ಅಲೆಕ್ಸಿ ನ್ಯಾವಲ್ನಿ ಸಾವಿಗೆ ಈ ರೀತಿ ಕಾರಣ ಕೊಟ್ಟು ರಷ್ಯಾ ಅಧಿಕಾರಿಗಳು ತಪ್ಪಿಸಿಕೊಳ್ಳೋ ಕೆಲಸ ಮಾಡ್ತಿದ್ದಾರೆ ಅಂತ ಆರೋಪ ಕೇಳಿ ಬರ್ತಿದೆ. ಇನ್ನು ಅಲೆಕ್ಸಿ ಸಾವಿಗೆ ರಷ್ಯಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ 340 ಜನರನ್ನ ಈಗಾಗಲೇ ರಷ್ಯಾ ಅಧಿಕಾರಿಗಳು ಅರೆಸ್ಟ್‌ ಮಾಡಿದ್ದಾರೆ ಅನ್ನೋ ವರದಿಗಳು ಬರ್ತಾ ಇವೆ.

ಇನ್ನು ಅಲೆಕ್ಸಿ ನ್ಯಾವಲ್ನಿ ಅವ್ರ ಜೀವನಾಧಾರಿತ ಅಮೆರಿಕನ್‌ ಡಾಕ್ಯುಮೆಂಟರಿ ಈಗ ಭಾರೀ ವೈರಲ್‌ ಆಗ್ತಿದೆ… ʻನ್ಯಾವಲ್ನಿʼ ಅನ್ನೋ ಹೆಸರಿನ ಈ ಡಾಕ್ಯುಮೆಂಟರಿ 2022ರಲ್ಲಿ ರಿಲೀಸ್‌ ಆಗಿತ್ತು. ಆಗ ಇದಕ್ಕೆ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಕೂಡ ಲಭಿಸಿತ್ತು. ಇದೀಗ ಅಲೆಕ್ಸಿ ಸಾವಿನ ನಂತ್ರ ಈ ಡಾಕ್ಯುಮೆಂಟರಿ ಕೂಡ ಮುನ್ನೆಲೆಗೆ ಬಂದಿದೆ. ಅದ್ರಲ್ಲೂ ಈ ಡ್ಯಾಕುಮೆಂಟರಿಯ 1 ನಿಮಿಷದ ವಿಡಿಯೋ ಕ್ಲಿಪ್‌ ಭಾರಿ ಸಂಚಲನ ಮೂಡಿಸಿದೆ. ಈ‌ ಪುಟ್ಟ ವಿಡಿಯೋ ಕ್ಲಿಪ್‌ನಲ್ಲಿ ಅದ್ರ ಡೈರೆಕ್ಟರ್‌ ಡೇನಿಯಲ್‌ ಅನ್ನೋರು ಅಲೆಕ್ಸಿಗೆ ಒಂದು ಪ್ರಶ್ನೆ ಕೇಳ್ತಾರೆ. ʻಮುಂದೊಂದಿನ ಅಕಸ್ಮಾತ್‌ ನಿಮ್ಮ ಹತ್ಯೆ ಮಾಡಿದ್ರೆ…ನೀವು ರಷ್ಯಾ ಜನರಿಗೆ ಯಾವ ಸಂದೇಶವನ್ನ ಬಿಟ್ಟು ಹೋಗ್ತಿರಾ?ʼ ಅಂತ ಕೇಳಲಾಗಿರುತ್ತೆ. ಆಗ ಅಲೆಕ್ಸಿ ಅದಕ್ಕೆ ಪವರ್‌ಫುಲ್‌ ಉತ್ತರ ಕೊಡ್ತಾರೆ. ʻಒಂದು ವೇಳೆ ನನ್ನ ಹತ್ಯೆ ಮಾಡಿದ್ರೆ… ಸಿಂಪಲ್‌, ನೆವರ್‌ ಗಿವ್‌ ಅಪ್‌!ʼ ಅಂದಿದ್ದಾರೆ. ಜೊತೆಗೆ, ʻಅವ್ರು ನಮ್ಮನ್ನ ಹತ್ಯೆ ಮಾಡೋಕೆ ನಿರ್ಧಾರ ಮಾಡಿದ್ದಾರೆ ಅಂತಂದ್ರೆ ನಾವು ಸಿಕ್ಕಾಪಟ್ಟೆ ಸ್ಟ್ರಾಂಗ್‌ ಇದ್ದೀವಿ ಅಂತ ಅರ್ಥ. ನಾವು ಈ ಪವರ್‌ನ್ನ ಬಳಸ್ಕೋಬೇಕು. ಬಿಟ್ಕೊಡಬಾರ್ದು… ನಾವು ಅದೆಂಥಾ ದೊಡ್ಡ ಶಕ್ತಿ ಅಂತ ನಮಗೆ ಅರಿವಿಲ್ಲ. ಇನ್ನೊಂದು ವಿಷಯ ಗಮನದಲ್ಲಿಡಬೇಕು…ಈ ದುಷ್ಟತನಕ್ಕೆ ಜಯ ಸಿಗ್ಬೇಕಾದ್ರೆ ಒಳ್ಳೆ ಜನರು ಸುಮ್ನೇ ಕೂರಬಾರದು..ಸದಾ ದುಷ್ಟರ ವಿರುದ್ಧ ಹೋರಾಡೋಕೆ ಆ್ಯಕ್ಟಿವ್‌ ಆಗಿರಿʼ ಅಂತ ರಷ್ಯಾ ಜನರಿಗೆ ಕರೆ ಕೊಟ್ಟಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗ್ತಿದೆ.

-masthmagaa.com

Contact Us for Advertisement

Leave a Reply