ತಮ್ಮ ಹೊಸ ಫ್ರೆಂಡ್‌ ಜೊತೆ ಆಲಿಯಾ ಸಿದ್ದಿಕಿ !

masthmagaa.com:

ಆಲಿಯಾ ಸಿದ್ದಿಕಿ ಮತ್ತು ನವಾಜುದ್ದೀನಿ ಸಿದ್ದಕಿ ಯಾವಾಗಲೂ ತಮ್ಮ ಪರ್ಸನಲ್‌ ವಿಷಯಗಳಿಂದಾನೇ ಸುದ್ದಿಯಲ್ಲಿರ್ತಾರೆ. ಆಲಿಯಾ ಸಿದ್ದಿಕಿ ತಮ್ಮ ಇನ್ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಹೊಸ ಫ್ರೆಂಡ್‌ ಒಬ್ಬರನ್ನ ಪರಿಚಯ ಮಾಡಿಸಿ ಸಂತೋಷವಾಗಿರಲು ಹಕ್ಕಿಲ್ಲವೇ? ಅಂತ ಕ್ಯಾಪ್ಶನ್‌ ಸಹ ಕೊಟ್ಟಿದ್ದಾರೆ. ಆಲಿಯಾ ಸಿದ್ದಿಕಿಗೆ ಇಷ್ಟ ಇಲ್ಲದೇ ಇದ್ರೂ ಕೂಡ ಕೆಲವು ವಾರಗಳ ಹಿಂದೆ ನವಾಜುದ್ದೀನ್‌ ಅವರ ಮನೆಯಲ್ಲಿ ಇದ್ರು. ನಂತರ ಒಂದು ರಾತ್ರಿ ಅವರನ್ನ ಮನೆಯಿಂದ ಆಚೆ ಹಾಕಲಾಯ್ತು ಅಂತ ಕೂಡ ಆಲಿಯಾ ಸಿದ್ದಿಕಿ ಅವರೇ ಹೇಳಿದ್ರು.

ಸದ್ಯ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಹೊಸ ಫ್ರೆಂಡ್ ಜೊತೆ ಇರುವ ಪೋಟೋ ಶೇರ್‌ ಮಾಡಿ ” ತುಂಬಾನೇ ಅಮೂಲ್ಯವಾದ ಸಂಬಂಧ ಅಂತ ಅಂದ್ಕೊಂಡ ರಿಲೇಷನ್‌ಶಿಪ್‌ನಿಂದ ಹೊರಗೆ ಬರೋಕೆ ನನಗೆ 19 ವರ್ಷ ಬೇಕಾಯ್ತು. ಆದ್ರೆ ನನ್ನ ಜೀವನದಲ್ಲಿ ನನ್ನ ಮೊದಲ ಆದ್ಯತೆ ಯಾವಾಗಲೂ ನನ್ನ ಮಕ್ಕಳೇ ಆಗಿರ್ತಾರೆ. ಇನ್ನು ಸ್ನೇಹಕ್ಕಿಂತ ಹೆಚ್ಚಾದ ಒಂದು ಸಂಬಂಧ ಇದೆ, ನಾನು ಆ ಸಂಬಂಧವನ್ನ ಹೊಂದಿದ್ದೇನೆ. ಹಾಗಾಗಿ ನಾನು ತುಂಬಾ ಖುಷಿಯಲ್ಲಿ ಇದ್ದೀನಿ, ಆ ಖುಷಿಯನ್ನ ನಿಮ್ಮ ಜೊತೆ ಕೂಡ ಹಂಚಿಕೋಳ್ತಾ ಇದೀನಿ. ನನಗೆ ಖುಷಿಯಾಗಿರಲು ಹಕ್ಕಿಲ್ವಾ?” ಅಂತ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply