ನಮ್ಮ ಸೌರಮಂಡಲವನ್ನು ಹೋಲುವ ಮತ್ತೊಂದು ಸೌರವ್ಯೂಹ ಪತ್ತೆ!

masthmagaa.com:

ನಮ್ಮ ಸೌರಮಂಡಲವನ್ನು ಹೋಲುವ ಇನ್ನೊಂದು ಸೋಲಾರ್‌ ಸಿಸ್ಟಮ್‌ನ್ನ ನಾಸಾದ ಕೆಪ್ಲರ್‌ ಸ್ಪೇಸ್‌ ಟೆಲಿಸ್ಕೋಪ್‌ ಪತ್ತೆ ಮಾಡಿದೆ. ಭೂಮಿಯಿಂದ 4,672 ಜ್ಯೋತಿರ್ವರ್ಷ(Light Year) ದೂರದಲ್ಲಿ ಹೆಚ್ಚು ಕಮ್ಮಿ ನಮ್ಮ ಭೂಮಿಯ ಗಾತ್ರದ 7 ಗ್ರಹಗಳನ್ನ ಹೊಂದಿರೊ Kepler-385 ಸೌರಮಂಡಲ ಗೋಚರವಾಗಿದೆ. ಇಂಟ್ರಸ್ಟಿಂಗ್‌ ಏನಪ್ಪ ಅಂದ್ರೆ ಈ ಸಿಸ್ಟಮ್ ಭೂಮಿಯ ಮೇಲಿನ ಕಂಡೀಶನ್‌ಗಳನ್ನೆ ಹೊಂದಿರ್ಬೋದು ಅಂತ ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಕಾರಣ ಏನಂದ್ರೆ ಈ ಸಿಸ್ಟಮ್‌ನ ಮಧ್ಯದಲ್ಲಿರೊ ‌ನಕ್ಷತ್ರ ನಮ್ಮ ಸೂರ್ಯನಿಗಿಂತ ಜಸ್ಟ್‌ 10% ದೊಡ್ಡದಾಗಿದೆ. ಅಂದ್ರೆ ಸೂರ್ಯ 10kg ಆದ್ರೆ ಈ ನಕ್ಷತ್ರ 11kg ಅಷ್ಟೆ. ಜೊತೆಗೆ ಸೂರ್ಯನಿಗಿಂತ ಕೇವಲ 5% ಹೆಚ್ಚು ತಾಪಮಾನ ಇದೆ. ಅದಲ್ಲದೇ ಇದರ ಎಲ್ಲ ಗ್ರಹಗಳು ಭೂಮಿಗಿಂತ ಹೆಚ್ಚು, ನೆಪ್ಚೂನ್‌ಗಿಂತ ಕಡಿಮೆ ಗಾತ್ರದಲ್ಲಿವೆ. ಸೋ ಈ ಗ್ರಹಗಳಲ್ಲಿ ಭೂಮಿಗೆ ಹೋಲುವ ಲಕ್ಷಣಗಳು ಇರ್ಬೋದು ಅಂತ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಅಂದ್ಹಾಗೆ ಮಿಲ್ಕೀವೇ ಗ್ಯಾಲಾಕ್ಸಿಯಲ್ಲಿನ ಎಕ್ಸೊಪ್ಲಾನೆಟ್‌ಗಳ ಅಧ್ಯಯನಕ್ಕೆಂದೆ ನಿಯೋಜಿಸಲಾಗಿರೊ ಕೆಪ್ಲರ್‌ ಟೆಲಿಸ್ಚೋಪ್‌ ಇದುವರೆಗೆ 4,400 ಎಕ್ಸೊಪ್ಲಾನೆಟ್‌ಗಳನ್ನ ಗುರುತಿಸಿದೆ. 2018ರಲ್ಲೇ ಈ ಟೆಲಿಸ್ಚೋಪ್‌ ರಿಟೈರ್ಡ್‌ ಆಗಿದ್ರು, ಅದಕ್ಕೂ ಮೊದಲೇ ಅದು ಕಲೆಕ್ಟ್‌ ಮಾಡಿರೋ ಡೆಟಾವನ್ನ ನಾಸಾ ಇನ್ನು ಅನಲೈಸ್‌ ಮಾಡ್ತಾ, ಹೊಸ ಹೊಸ ಗ್ರಹಗಳ ಲೊಕೇಶನ್‌ನ್ನ ರಿವೀಲ್‌ ಮಾಡ್ತಿದೆ.

-masthmagaa.com

Contact Us for Advertisement

Leave a Reply