ದೆಹಲಿಯಿಂದ ಆಂಧ್ರಕ್ಕೆ ಬಂದ 43 ಜನರಲ್ಲಿ ಕೊರೋನಾ..! ರಾಜ್ಯದ ಕಥೆ ಏನು..?

masthmagaa.com:

ದೆಹಲಿಯ ನಿಜಾಮುದ್ದಿನ್ ಮರ್ಕಝ್​ ಮುಸ್ಲಿಂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಂಧ್ರಪ್ರದೇಶಕ್ಕೆ ಬಂದ 43 ಜನರಿಗೂ ಕೊರೋನಾ ವೈರಸ್ ತಗುಲಿರೋದು ದೃಢಪಟ್ಟಿದೆ ಅಂತ ಆಂಧ್ರಪ್ರದೇಶ ಮುಖ್ಯಮಂತ್ರಿ ಕಚೇರಿ ಸ್ಪಷ್ಟಪಡಿಸಿದೆ. ಇಲ್ಲಿ ನಡೆದ ತಬ್ಲಿಘಿ ಜಮಾತ್​  ಕಾರ್ಯಕ್ರಮದಲ್ಲಿ ಕರ್ನಾಟಕದ 342 ಜನ ಕೂಡ ಭಾಗವಹಿಸಿದ್ದರು ಅಂತ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಇದರಲ್ಲಿ 200 ಮಂದಿಯನ್ನ ಈಗಾಗಲೇ ಕ್ವಾರಂಟೈನ್​ನಲ್ಲಿ ಇಡಲಾಗಿದ್ದು, ಕೊರೋನಾ ಪರೀಕ್ಷೆ ನಡೆಸಲಾಗ್ತಿದೆ.

ಮಾರ್ಚ್​ ಮೊದಲೆರಡು ವಾರದಲ್ಲಿ ದೆಹಲಿಯ ನಿಜಾಮುದ್ದಿನ್​ ಮರ್ಕಝ್ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶ, ವಿದೇಶಗಳ ಸಾವಿರಾರು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಬಹುತೇಕರು ಅವರವರ ರಾಜ್ಯಕ್ಕೆ ವಾಪಸ್​ ಬಂದ್ರೆ, ಸುಮಾರು 2 ಸಾವಿರ ಜನ ಅದೇ ಕಟ್ಟಡದಲ್ಲಿ ವಾಸವಿದ್ದರು. ಈ ಪೈಕಿ ಹಲವರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದರೂ ಯಾರೂ ಕೂಡ ಸರ್ಕಾರಕ್ಕಾಗಲೀ, ಅಧಿಕಾರಿಗಳಿಗಾಗಲೀ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಬಳಿಕ ಆಸ್ಪತ್ರೆಗೆ ಬಂದವರ ಮೂಲವನ್ನು ಕೆದಕಿದಾಗ ಕೊರೋನಾ ಸ್ಫೋಟದ ಕೇಂದ್ರಬಿಂದು ಈ ತಬ್ಲಿಘಿ ಜಮಾತ್ ಕಾರ್ಯಕ್ರಮ ಅನ್ನೋದು ಗೊತ್ತಾಗಿದೆ. ಸದ್ಯ ಮರ್ಕಝ್ ಕಟ್ಟಡವನ್ನು ಖಾಲಿ ಮಾಡಿಸಿದ್ದು, ಸೋಂಕಿತರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

-masthmagaa.com

Contact Us for Advertisement

Leave a Reply