ಸುಪ್ರೀಕೋರ್ಟ್‌ನಲ್ಲಿ ಮೂರನೇ ಬಾರಿಗೆ ಮಹಿಳಾ ಪೀಠ ರಚನೆ!

masthmagaa.com:

ಸುಪ್ರೀಂಕೋರ್ಟ್‌ನ ವೈವಾಹಿಕ ವ್ಯಾಜ್ಯಗಳು ಹಾಗೂ ಜಾಮೀನು ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನ ವಿಚಾರಣೆ ಮಾಡೋಕೆ ಮಹಿಳಾ ನ್ಯಾಯಾಧೀಶರ ಪೀಠವನ್ನ ರಚಿಸಲಾಗಿದೆ. ಈ ದ್ವಿ ಸದಸ್ಯ ಪೀಠ, ನ್ಯಾಯಾಧೀಶರಾದ ಹಿಮಾ ಕೊಹ್ಲಿ ಹಾಗೂ ಬೇಲಾ ಎಂ ತ್ರಿವೇದಿ ಅವ್ರನ್ನ ಒಳಗೊಂಡಿದೆ. ಪ್ರತಿ ಗುರುವಾರ ವೈವಾಹಿಕ ವ್ಯಾಜ್ಯಗಳ 10 ಪ್ರಕರಣಗಳನ್ನ ವಿಚಾರಣೆ ಮಾಡಲಾಗುತ್ತೆ ಅಂತ ಈ ಹಿಂದೆ ಸುಪ್ರೀಂಕೋರ್ಟ್‌ ಹೇಳಿತ್ತು. ಅದಕ್ಕಾಗಿ ಮುಖ್ಯ ನ್ಯಾಯಾಧೀಶ ಡಿ ವೈ ಚಂದ್ರಚೂಡ್‌ ಕೇವಲ ಮಹಿಳೆಯರನ್ನೇ ಒಳಗೊಂಡ ಪೀಠ ರಚಿಸಿದ್ದಾರೆ. ಅಂದ್ಹಾಗೆ ಸುಪ್ರೀಂಕೋರ್ಟ್‌ ಇತಿಹಾಸದಲ್ಲಿ ಈ ರೀತಿ ಮಹಿಳಾ ಪೀಠ ರಚನೆಯಾಗ್ತಿರೋದು ಇದು ಮೂರನೇ ಬಾರಿ. ಈ ಮೊದಲು 2013 ಹಾಗೂ 2018ರಲ್ಲಿ ಮಹಿಳಾ ನ್ಯಾಯಾಧೀಶರನ್ನ ಒಳಗೊಂಡ ಪೀಠಗಳನ್ನ ರಚಿಸಲಾಗಿತ್ತು.

-masthmagaa.com

Contact Us for Advertisement

Leave a Reply