ಅಸ್ಸಾಂನಲ್ಲಿ TMC ಕಾಂಗ್ರೆಸ್‌ ಮಧ್ಯೆ ಲೋಕಸಭೆಗೆ ಮೈತ್ರಿ ಅಸಂಭವ!

masthmagaa.com

ಲೋಕಸಭೆ ಸೀಟು ಹಂಚಿಕೆ ವಿಚಾರದಲ್ಲಿ ವೆಸ್ಟ್‌ ಬೆಂಗಾಲ್‌ನಲ್ಲಿ ಕಾಂಗ್ರೆಸ್‌ ಜೊತೆ TMC ಮೈತ್ರಿ ಮಾಡ್ಕೊ‍ಂಡಿಲ್ಲ. ಹೀಗಾಗಿ ಅಸ್ಸಾಂನಲ್ಲೂ TMC ಜೊತೆ ಮೈತ್ರಿ ಅಸಂಭವ ಅನ್ನೋ ಬಗ್ಗೆ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಭೂಪೇನ್‌ ಬೋರಾಹ್‌ ಪರೋಕ್ಷವಾಗಿ ಮಾತನಾಡಿದ್ದಾರೆ. ಬಂಗಾಳದಲ್ಲಿ ಕಾಂಗ್ರೆಸ್‌ 42 ಸ್ಥಾನಗಳಲ್ಲಿ 6 ಸ್ಥಾನ ಕೇಳಿದ್ದಕ್ಕೆ ಮಮತಾ ಆಕ್ಷೇಪ ವ್ಯಕ್ತ ಪಡಿಸಿ ಮೈತ್ರಿಯನ್ನೇ ಬ್ರೇಕ್‌ ಮಾಡಿದ್ರು. ಇನ್ನು 14 ಲೋಕಸಭಾ ಸ್ಥಾನಗಳಿರೋ ಅಸ್ಸಾಂನಲ್ಲಿ TMC ಜೊತೆ ಕಾಂಗ್ರೆಸ್‌ ಮೈತ್ರಿ ನೀವೇ ಅರ್ಥಮಾಡ್ಕೊಬೇಕು ಅಂತ ಮೈತ್ರಿ ಅಸಂಭವ ಅನ್ನೊ ಮೆಸೇಜ್‌ನ್ನ ಪರೋಕ್ಷವಾಗಿ ಬೋರಾಹ್‌ ಪಾಸ್‌ ಮಾಡಿದ್ದಾರೆ. ಈ ಮೂಲಕ ವೆಸ್ಟ್‌ ಬೆಂಗಾಲ್‌ ಮೈತ್ರಿಯ ಗಾಳಿ ಪಕ್ಕದ ಅಸ್ಸಾಂಗೂ ತಗುಲಿದಂತಾಗಿದೆ.

-masthmagaa.com

Contact Us for Advertisement

Leave a Reply