ಗ್ರಾಹಕರಿಗೆ ವೇಗವಾಗಿ ವಸ್ತುಗಳನ್ನ ತಲುಪಿಸಲು ಬರ್ತಿದೆ ಅಮೆಜಾನ್‌ ಏರ್‌ ವಿಮಾನ!

masthmagaa.com:

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತನ್ನ ಸಾರಿಗೆ ನೆಟ್‌ವರ್ಕ್‌ನ್ನ ಹೆಚ್ಚಿಸಲು ಹಾಗೂ ದೇಶದಲ್ಲಿನ ಗ್ರಾಹಕರಿಗೆ ವೇಗವಾಗಿ ವಸ್ತುಗಳನ್ನ ವಿತರಣೆ ಮಾಡೋಕೆ ಅಮೆಜಾನ್‌ ಏರ್‌ ಅನ್ನೊ ಹೊಸ ಕಾರ್ಗೊ ವಿಮಾನವನ್ನ ಪ್ರಾರಂಭಿಸಿದೆ. ಕ್ವಿಕ್‌ಜೆಟ್‌ ಕಾರ್ಗೋ ಏರ್‌ಲೈನ್ಸ್‌ ಪ್ರೈವೇಟ್‌ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುವ ಬೋಯಿಂಗ್‌ 737-800 ವಿಮಾನ, ಸರಕುಗಳನ್ನು ಸಾಗಿಸಲು ಬಳಕೆಯಾಗಲಿದೆ. ಆರಂಭದಲ್ಲಿ ಬೆಂಗಳೂರು, ಮುಂಬೈ, ದೆಹಲಿ ಮತ್ತು ಹೈದರಾಬಾದ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ. ಹೈದರಾಬಾದ್‌ನಲ್ಲಿ ಈ ಕಾರ್ಗೊ ವಿಮಾನವನ್ನು ಲಾಂಚ್‌ ಮಾಡಲಾಗಿದೆ. ಈ ಮೂಲಕ ಕ್ವಿಕ್‌ ಜೆಟ್‌ ಕ್ಯಾರಿಯರ್‌ ಬಳಸುವ ಮೊದಲ ಇ-ಕಾಮರ್ಸ್‌ ಕಂಪನಿ ಅನ್ನೊ ಹಿರಿಮೆಗೆ ಅಮೆಜಾನ್‌ ಪಾತ್ರವಾಗಲಿದೆ.

-masthmagaa.com

Contact Us for Advertisement

Leave a Reply