ಪ್ಯಾಲೆಸ್ತೀನ್‌ ದಾಳಿಗೆ ಅಮೆರಿಕ ಸಿಟ್ಟು! ಇಸ್ರೇಲಿಗರ ಮೇಲೆ ನಿರ್ಬಂಧ!

masthmagaa.com:

ಸದಾ ಇಸ್ರೇಲ್‌ ಮಾಡಿದ್ದಕ್ಕೆಲ್ಲಾ ಹ್ಞೂ ಅಂತ ತಲೆಯಾಡಿಸ್ತಿದ್ದ ಅಮೆರಿಕ ಇದೀಗ ಇಸ್ರೇಲ್‌ ವಿರುದ್ಧ ತಿರುಗಿ ಬೀಳೋ ಹಾಗೇ ಕಾಣಿಸ್ತಿದೆ. ವೆಸ್ಟ್‌ ಬ್ಯಾಂಕ್‌ನ್ನ ಸ್ವಲ್ಪ ಸ್ವಲ್ಪಾನೇ ಕಬಳಿಸ್ಕೊಂಡು ಟೆಂಟ್‌ ಹೂಡಿರೋ ಇಸ್ರೇಲಿಗರ ಮೇಲೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಗರಂ ಆಗಿದ್ದಾರೆ. ಫೆಬ್ರುವರಿ 01 ರಂದು ವೆಸ್ಟ್‌ಬ್ಯಾಂಕ್‌ನಲ್ಲಿರೋ ಇಸ್ರೇಲಿ ಸೆಟ್ಲರ್‌ಗಳ ವಿರುದ್ಧ ಬೈಡನ್‌ ಅಫಿಶಿಯಲ್ಲಾಗಿ ನಿರ್ಬಂಧ ಆದೇಶ ಹೊರಡಿಸಿದ್ದಾರೆ. ಮೊದಲ ಹಂತದಲ್ಲಿ 4 ಮಂದಿಯ ಮೇಲೆ ಹಣಕಾಸಿನ ನಿರ್ಬಂಧ ಹಾಗೂ ವೀಸಾ ಬ್ಯಾನ್‌ ಹೇರಿ ಆದೇಶ ನೀಡಿದ್ದಾರೆ. ವೆಸ್ಟ್‌ ಬ್ಯಾಂಕ್‌ನಲ್ಲಿ ಇವ್ರು ಪ್ಯಾಲಸ್ತೀನಿಯರ ಮತ್ತು ಇಸ್ರೇಲಿ ಶಾಂತಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಅಂತ ಆರೋಪಿಸಿದ್ದಾರೆ. ಹೀಗಾಗಿ ಈ ನಾಲ್ವರು ಅಮೆರಿಕದ ಹಣಕಾಸು ವ್ಯವಸ್ಥೆ ಉಪಯೋಗಿಸೋದನ್ನ ತಡೆಯಲಾಗಿದೆ. ಜೊತೆಗೆ ಅಮೆರಿಕದ ನಾಗರಿಕರು ಇವ್ರೊಂದಿಗೆ ವ್ಯವಹರಿಸೋದಕ್ಕೂ ನಿರ್ಬಂಧ ಹೇರಲಾಗಿದೆ. ಹಿಂಸಾಚಾರ ನಿಲ್ಲಲಿಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಇನ್ನೂ ತೀವ್ರ ಕಠಿಣ ಕ್ರಮ ಕೈಗೊಳ್ಳೋದಾಗಿ ವಾರ್ನ್‌ ಮಾಡಿದೆ. ಇನ್ನು ವೆಸ್ಟ್‌ ಬ್ಯಾಂಕ್‌ನಲ್ಲಿ ನಡೀತಿರೋ ದಾಳಿ ಬಗ್ಗೆ ರಿಯಾಕ್ಟ್‌ ಮಾಡಿರೋ ಪ್ಯಾಲಸ್ತೀನ್‌ ಅಧಿಕಾರಿಗಳು, ʻಇಸ್ರೇಲಿಗರಿಂದ ಅದೆಷ್ಟೋ ಪ್ಯಾಲಸ್ತೀನಿಯರ ಹತ್ಯೆ ಆಗಿದೆ. ಅದೆಷ್ಟೋ ಕಾರ್‌ಗಳಿಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾರೆ ಮತ್ತು ಬೆಡೋಯಿನ್‌ ಸಮುದಾಯದ ಮೇಲೆ ದಾಳಿ ಮಾಡಿ ಅವ್ರ ಸ್ಥಳಾಂತರಕ್ಕೆ ಫೋರ್ಸ್‌ ಮಾಡಿದ್ದಾರೆʼ ಅಂದಿದ್ದಾರೆ. ಇನ್ನು ಈ ಬಗ್ಗೆ ಅಮೆರಿಕದ ಭದ್ರತಾ ಸಲಹೆಗಾರ ಜೇಕ್‌ ಸಲ್ಲಿವನ್‌ ಕೂಡ ರಿಯಾಕ್ಟ್‌ ಮಾಡಿದ್ದಾರೆ. ʻಈ ರೀತಿಯ ಹಿಂಸಾಚಾರಗಳು ವೆಸ್ಟ್‌ ಬ್ಯಾಂಕ್‌, ಇಸ್ರೇಲ್‌ ಮತ್ತು ಮಿಡಲ್‌ ಈಸ್ಟ್‌ ಪ್ರದೇಶಗಳ ಶಾಂತಿ, ಭದ್ರತೆ ಮತ್ತು ಸ್ಥಿರತೆಗೆ ಅಪಾಯವನ್ನುಂಟು ಮಾಡುತ್ತೆ. ಅಷ್ಟೇ ಅಲ್ದೇ ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯ ಹಿತಾಸಕ್ತಿಗೆ ಒಳ್ಳೆದಲ್ಲʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply