ಈಟಿ ದೊಣ್ಣೆಗಳನ್ನ ರೆಡಿ ಮಾಡುತ್ತಿದೆ ಚೀನಾ!

masthmagaa.com:

ಚೀನಾ, ಗಲ್ವಾನ್‌ ವ್ಯಾಲಿ ಸಂಘರ್ಷದಲ್ಲಿ ಬಳಸಿದ್ದ ಕೋಲ್ಡ್‌ ವೆಪನ್‌ ಅಂದ್ರೆ ಈಟಿಗಳು, ಮುಳ್ಳುಗಳಿಂದ ಕೂಡಿದ ಆಯುಧಗಳಂಥ ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ತೊಡಗಿದೆ ಅಂತ ಗುಪ್ತಚರ ವರದಿ ಮೂಲಕ ತಿಳಿದು ಬಂದಿದೆ. ಚೀನಾದ ಸೇನೆ ಸುಮಾರು 2,600 ಕೋಲ್ಡ್‌ ವೆಪನ್‌ಗಳನ್ನ ಖರೀದಿಸೋಕೆ ರೆಡಿಯಾಗಿದ್ದು, ಈ ವರ್ಷದ ಅಂತ್ಯ ವೇಳೆಗೆ ಚೀನಾ ಕೈಸೇರಲಿವೆ ಎನ್ನಲಾಗಿದೆ. ಗಲ್ವಾನ್‌ ಸಂಘರ್ಷದಲ್ಲಿ ಚೀನಾದ ಸೇನೆ ಈ ಕೋಲ್ಡ್‌ ವೆಪನ್‌ಗಳನ್ನ ಮೊದಲ ಬಾರಿ ಬಳಸಿತ್ತು. ಅಂದಿನಿಂದ ಈ ವೆಪನ್‌ಗಳನ್ನ ಗಡಿಯಲ್ಲಿನ ತನ್ನ ಪಡೆಗಳಿಗೆ ಚೀನಾ ನೀಡ್ತಾ ಬಂದಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂದ್ಹಾಗೆ 1962ರ ಯುದ್ದ ಹಾಗೂ 1967 ಗಡಿ ಸಂಘರ್ಷದ ನಂತರ ಚೀನಾ-ಭಾರತ ಗಡಿಯಲ್ಲಿ ಫೈರಿಂಗ್‌ ಮಾಡದಂತೆ ಉಭಯ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ. ಯಾಕಂದ್ರೆ ಎರಡು ದೇಶಗಳ ಹತ್ತಿರ ಕೂಡ ಬೇಕಾದಷ್ಟು ಅಪಡೇಟೆಡ್‌ ವೆಪನ್‌ಗಳು, ಪವರ್‌ಫುಲ್‌ ಸೇನೆ ಹಾಗೂ ನ್ಯೂಕ್ಲಿಯರ್‌ ವೆಪನ್‌ ಕೂಡ ಇದೆ. ಅಲ್ದೇ ಉಭಯ ದೇಶಗಳು ಪರಸ್ಪರ ವ್ಯಾಪಾರದಲ್ಲಿ ಅವಲಂಬಿತವಾಗಿವೆ. ಒಂದ್‌ ವೇಳೆ ಗಡಿ ಪ್ರದೇಶದಲ್ಲಿ ಗುಂಡು ಹಾರಿದ್ರೆ, ಎರಡು ಸೇನೆಯನ್ನ ಸ್ಟಾಪ್‌ ಮಾಡೋದು ತುಂಬಾ ಕಷ್ಟವಾಗುತ್ತೆ. ಯುದ್ದ ತೀವ್ರಗೊಳ್ಳುತ್ತೆ. ಹಾಗಾಗಿ ಭಾರತ ಮತ್ತು ಚೀನಾ ಗಡಿಯಲ್ಲಿ ಫೈರಿಂಗ್‌ ಮಾಡದಂತೆ ನಿರ್ಬಂಧಿಸಿವೆ. ಆದ್ರೆ 1967ರ ಬಳಿಕ ಎರಡು ಸೇನೆಗಳ ನಡುವೆ ಕಾದಾಟ ನಡೆದ್ರೆ, ಕಲ್ಲು ಎಸೆಯೋದು, ತಿಕ್ಕಾಟ ನಡಿತಿತ್ತು. ಬಳಿಕ ಚೀನಾ ಕೋಲ್ಡ್‌ ವೆಪನ್‌ಗಳನ್ನ ಬಳಸೋಕೆ ಶುರು ಮಾಡ್ತು. ಇತ್ತ ಭಾರತ ಕೂಡ ತನ್ನ ವೆಪನ್‌ಗಳನ್ನ ಸಿದ್ದಪಡಿಸ್ತು. ತ್ರಿಶೂಲ, ವಜ್ರಾಯುಧದಂಥ ಆಯುಧಗಳನ್ನ ಬಳಸುತ್ತೆ.

-masthmagaa.com

Contact Us for Advertisement

Leave a Reply