ಕರ್ನಾಟಕದಲ್ಲಿ ಕೃಷಿ ಕಾನೂನುಗಳ ಪರ ಬಿಜೆಪಿ ‘ಚಾಣಕ್ಯ’ ಬ್ಯಾಟಿಂಗ್​!

masthmagaa.com:

ನೂತನ ಕೃಷಿ ಕಾಯ್ದೆಗಳ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇವತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಬ್ಯಾಟ್ ಬೀಸಿದ್ದಾರೆ. ಬಾದಾಮಿ ತಾಲೂಕಿನ ಕೆರಕಲಮಟ್ಟಿಯಲ್ಲಿ ಸಕ್ಕರೆ ಕಾರ್ಖಾನೆಗಳ ಪುನಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಮಿತ್ ಶಾ, ‘ಮೋದಿ ಸರ್ಕಾರ ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಬದ್ಧವಾಗಿದೆ. 3 ಕೃಷಿ ಕಾನೂನುಗಳು ರೈತರ ಆದಾಯವನ್ನ ಹಲವು ಪಟ್ಟು ಹೆಚ್ಚು ಮಾಡುತ್ತೆ. ರೈತರು ಈಗ ತಮ್ಮ ಬೆಳೆ ಅಥವಾ ಉತ್ಪನವನ್ನ ದೇಶದ ಯಾವುದೇ ಭಾಗದಲ್ಲಿ ಮಾರಬಹುದು. ವಿದೇಶದಲ್ಲೂ ಮಾರಬಹುದು ಅಂತ ಹೇಳಿದ್ರು. ಇದೇ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್​ ಶಾ, ‘ಈಗ ರೈತರ ಪರ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ನಾನು ಕೇಳೋದೇನಂದ್ರೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರೈತರಿಗೆ ವರ್ಷಕ್ಕೆ 6,000 ರೂಪಾಯಿಯನ್ನ ನೀವ್ಯಾಕೆ ಕೊಡಲಿಲ್ಲ? ನೀವು ಅಧಿಕಾರದಲ್ಲಿದ್ದಾಗ ಎಥೆನಾಲ್ ಪಾಲಿಸಿಯನ್ನ ಯಾಕೆ ತಿದ್ದುಪಡಿ ಮಾಡಲಿಲ್ಲ? ಯಾಕಂದ್ರೆ ನಿಮ್ಮ ಉದ್ದೇಶ ಸರಿ ಇರಲಿಲ್ಲ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply